ಶಿವಮೊಗ್ಗ: ಸುಲಿಗೆ, ದರೋಡೆ, ಮನೆಕಳ್ಳತನ ಹಾಗೂ ಮೋಟಾರ್ ಬೈಕ್, ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದು, 5,30,000 ರೂ ಮೌಲ್ಯದ ಬಂಗಾರ, ಟಿವಿ ಮತ್ತು ಮೋಟಾರ್ ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಗ್ರಾಮದ ಸತೀಶ ಯಾನೆ ಕರಡಿ, ಗೋಪಾಳದ ಸಿದ್ದೇಶ್ವರ ವೃತ್ತದ ಬಳಿ ವಾಸದ ಪ್ರವೀಣ್, ಮಿಳಘಟ್ಟದ ಅಭಿಷೇಕ್ ಹಾಗೂ ಗಾಜನೂರಿನ ಇಂದ್ರ ನಗರದ ನಿವಾಸಿ ಶಿವಕುಮಾರ್ ಎಂಬ ಆರೋಪಿಗಳನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ದ ಹೊಳೆಹೊನ್ನೂರು ಪೊಲೀಸ್ ಠಾಣೆ ಸೇರಿದಂತೆ, ಶಿವಮೊಗ್ಗದ ತುಂಗನಗರ ಪೊಲೀಸ್ ಠಾಣೆ, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಸುಲಿಗೆ ಪ್ರಕರಣಗಳು, ಮಾಳೂರು ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ, ಶಿಕಾರಿಪುರ, ರಿಪ್ಪನ್ ಪೇಟೆ, ತುಂಗನಗರ, ಶಿವಮೊಗ್ಗ ಗ್ರಾಮಾಂತರ, ರಿಪ್ಪನ್ ಪೇಟೆ ಹಾಗೂ ಹೊಳೆಹೊನ್ನೂರು ಸೇರಿದಂತೆ ಎಂಟು ಠಾಣೆಗಳಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ನಲಪಾಡ್ ಹಲ್ಲೆ ಮಾಡಿಲ್ಲ,ಯಾರಾದರೂ ದೂರು ಕೊಟ್ಟಿದ್ದಾರಾ : ಈಶ್ವರ್ ಖಂಡ್ರೆ ಪ್ರಶ್ನೆ
ಇವರನ್ನು ಹಿಡಿಯಲು ಎಸ್ಪಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಾತೆ, ಭದ್ರಾವತಿ ಉಪವಿಭಾಗದ ಡಿವೈಎಸ್ಪಿಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದಲ್ಲಿ ಪಿಎಸ್‌ಐ ಸುರೇಶ್, ಸಿಬ್ಬಂದಿಗಳಾದ ಲಿಂಗೇಗೌಡ, ಮಂಜುನಾಥ್, ಪ್ರಸನ್ನ, ಪ್ರಕಾಶ್ ನಾಯ್ಕ್, ವಿಶ್ವನಾಥ್, ಕಾಶೀನಾಥ್, ಇವರನ್ನು ಒಳಗೊಂಡ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು