ಹೊಳೆಹೊನ್ನೂರು : ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಎರಡು ಮನೆಗಳು ಕುಸಿದು ಬಿದ್ದಿರುವ ಘಟನೆ ಅರಹತೊಳಲು ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಬಾಯಿ ಕೋಂ ಗಿರಿಯಾನಾಯ್ಕ ಮತ್ತು ಗೀತಾ ಕೋಂ ನಾಗೇಂದ್ರಪ್ಪ ಎಂಬುಬರ ಮನೆಗಳು ಧರೆಗುರುಳಿವೆ.
ಕಳೆದ ಹಲವು ದಿನಗಳಿಂದ ಮಳೆ ನಿರಂತರವಾಗಿ ಬರುತ್ತಲೇ ಇದೆ. ಇದರಿಂದ ಮನೆಯ ಗೋಡೆಗಳು ಹಸಿಯಾಗಿ ಜೌಗು ಹಿಡಿದು ಕುಸಿಯುವ ಹಂತಕ್ಕೆ ಬಂದು ಮಂಗಳವಾರ ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ಕುಸಿದು ಬಿದ್ದಿವೆ. ರಾತ್ರಿ ಆಗಿದ್ದರಿಂದ ಮನೆಯಲ್ಲಿ ಊಟ ಮಾಡಿ ಮಲಗಿದ್ದ ದಂಪತಿಗಳ ಮೇಲೆ ಮನೆಯ ಮೇಲ್ಚಾವಣಿಯು ಮುರಿದು ಬಿದ್ದಿದೆ. ಇದರಿಂದ ಗಾಯಕ್ಕೆ ಒಳಗಾದ ಲಕ್ಷ್ಮೀ ಬಾಯಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಯಿತು.
ಒಂದೇ ದಿನ ವಡ್ಡರಹಟ್ಟಿ ಗ್ರಾಮದಲ್ಲಿ ಎರಡು ಮನೆಗಳು ಬಿದ್ದಿರುವ ವಿಷಯ ತಿಳಿಯುತ್ತಿಂದ್ದಂತೆ ಕಂದಾಯ ಅಧಿಕಾರಿ ಮಾನೋಜಿರಾವ್, ಗ್ರಾಮ ಲೆಕ್ಕಾಧಿಕಾರಿ ಸುಧಾ, ಅರಹತೊಳಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ಚಂದ್ರಶೇಖರ್, ಸ್ಥಳೀಯ ಗ್ರಾಪಂ ಸದಸ್ಯ ಕೆ.ರಾಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ : ಜೈಲುಗಳಲ್ಲಿ ವೈದ್ಯರ ಕೊರತೆ: ವರದಿ ಕೇಳಿದ ಹೈಕೋರ್ಟ್