Advertisement

Holehonnur: ಹೊಸಕೊಪ್ಪ ಗ್ರಾಮದಲ್ಲಿ ಬಲಿಗಾಗಿ ಕಾದಿರುವ ಗುಂಡಿ

04:03 PM Oct 17, 2024 | Kavyashree |

ಹೊಳೆಹೊನ್ನೂರು: ಸ್ಥಳೀಯ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ತಮಿಳರ ಬೀದಿಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸಲು ತೆಗೆದಿರುವ ಗುಂಡಿ ಬಲಿಗಾಗಿ ಕಾದಿರುವಂತೆ ಇದ್ದು‌, ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.

Advertisement

ಪಟ್ಟಣ ಪಂಚಾಯತ್ ವತಿಯಿಂದ ಸುಮಾರು 4 ತಿಂಗಳ ಹಿಂದೆ ಕುಡಿಯುವ ನೀರಿನ ಪೈಪ್ ಹಾಕಲು ರಸ್ತೆಯಲ್ಲಿ ದೊಡ್ಡಗುಂಡಿಯನ್ನು ತೆಗೆಯಲಾಗಿದೆ. ಆದರೆ ಈವರೆಗೂ ಪೈಪ್ ಅಳವಡಿಸದೆ ಗುಂಡಿಯನ್ನು ಹಾಗೆ ಬಿಡಲಾಗಿದೆ. ಇದರಿಂದ ಅಲ್ಲಿ ರಾತ್ರಿ ವೇಳೆ ಓಡಾಡುವ ವಾಹನ ಸವಾರರಿಗೆ ಗುಂಡಿ ಕಾಣದೆ ಹಲವರು ಮಂದಿ ಬಿದ್ದು ಎದ್ದು ಹೋಗಿದ್ದಾರೆ. ಅಲ್ಲದೆ ಚಿಕ್ಕ ಮಕ್ಕಳು ಆಟ ಆಡುವಾಗ ಅನೇಕ ಬಾರಿ ಬಿದ್ದಿದ್ದು ದಾರಿಹೋಕರು ರಕ್ಷಿಸಿದ್ದಾರೆ.

ಯಾರು ಇಲ್ಲದ ವೇಳೆ ಮಕ್ಕಳು ಬಿದ್ದರೆ ಅಮಾಯಕರ ಪ್ರಾಣ ಹಾನಿಯಾಗುವ ಸಂಭವ ಇರುತ್ತದೆ. ಇದನ್ನು ಅರಿತ ಸ್ಥಳೀಯರು ಸ್ಥಳೀಯ ಪಟ್ಟಣ ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದೆ ಇರುವ ಹಾಗೂ ಕರ್ತವ್ಯ ನಿರ್ಲಕ್ಷತನ ವಹಿಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ದೊಡ್ಡ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟವರು ತಕ್ಷಣ ಗಮನ ಹರಿಸಿ ಪೈಪ್ ಅಳವಡಿಕೆ ಕಾಮಗಾರಿ ಮುಗಿಸಿ ತೆರೆದಿರುವ ಗುಂಡಿ ಮುಚ್ಚಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next