Advertisement

ಎಳ್ಳಅಮಾವಾಸ್ಯೆಸಂಭ್ರಮ

05:13 PM Dec 26, 2019 | Naveen |

ಹೊಳೆಆಲೂರ: ಎಳ್ಳ ಅಮಾವಾಸ್ಯೆ ಅಂಗವಾಗಿ ಹೊಳೆಆಲೂರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರೈತ ಬಾಂಧವರು ತಮ್ಮ ಚಕ್ಕಡಿ, ಆಟೋ, ಟ್ರ್ಯಾಕ್ಟರ್‌ಗಳಲ್ಲಿ ತಮ್ಮ ತಮ್ಮ ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಉಡಿ ತುಂಬಿ, ಹೊಲದ ತುಂಬಾ ಚರಗಾ ಚೆಲ್ಲಿ ಸಂತಸಪಟ್ಟರು.

Advertisement

ಕಳೆದ ಎರಡು ತಿಂಗಳ ಹಿಂದೆ ಮಲಪ್ರಭಾ ನೆರೆ ಹಾವಳಿಗೆ ರೈತರು ಸಾಕಷ್ಟು ಹಾನಿ ಅನುಭವಿಸಿದ್ದರೂ ತಂಪು ವಾತಾವರಣದ ಪರಿಣಾಮ ಈ ಬಾರಿ ಹೊಲದಲ್ಲಿ ಹಿಂಗಾರು ಬೆಳೆ ಉತ್ತಮವಾಗಿ ಬೆಳೆದು ನಿಂತಿರುವ ಕಡಲೆ, ಬಿಳಿಜೋಳ, ಗೋಧಿ, ಮೆಣಸಿನಕಾಯಿ ರೈತರ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದೆ.

ಕಡಬು, ಎಳ್ಳ ಹೋಳಿಗೆ, ಶೆಂಗಾ ಹೋಳಿಗೆ, ಪುಂಡಿ ಪಲ್ಲೆ, ಬದನೆಕಾತಿ, ಹೆಸರು ಕಾಳು, ವಿವಿಧ ಚಟ್ನಿಯ ದೊಡ್ಡ ದೊಡ್ಡ ಬುತ್ತಿಗಂಟು ಗಾಡಿಯಲ್ಲಿ ಹೇರಿಕೊಂಡು ಹೊಲ ಇಲ್ಲದ ನೆರೆ ಹೊರೆಯವರನ್ನು ಕರೆದುಕೊಂಡು ಅರಿಸಿನ, ಕುಂಕಮ, ಬಳೆ, ಸೀರೆಯಿಂದ ಹೊಲದ ಮಧ್ಯದಲ್ಲಿರುವ ಬನ್ನಿ ಗಿಡಕ್ಕೆ ಭೂಮಿ ತಾಯಿ ಎಂದು ಭಾವಿಸಿಕೊಂಡು ಉಡಿ ತುಂಬಿದರು. ನಂತರ ಸಾಮೂಹಿಕ ಭೋಜನ ಮಾಡಿ ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next