Advertisement
ಪೂರ್ಣಗೊಳ್ಳದ ಕಾಮಗಾರಿಗ್ರಾಮೀಣ ಪ್ರದೇಶದ ಅನೇಕ ಕಡೆ ನಿರ್ಮಾಣಗೊಂಡಿರುವ ಕಾಲು ಸಂಕಗಳು ಆ ಮೂಲಕ ಸಂಚರಿಸುವ ನಿತ್ಯ ಪ್ರಯಾಣಿಕರಿಗೆ ಸಂಪರ್ಕದ ಕೊಂಡಿಯಾಗಬಹುದೆಂಬ ನಿರೀಕ್ಷೆ ಹುಸಿಯಾಗುತ್ತಿದ್ದು, ಬಹುತೇಕ ಕಡೆ ನಿರ್ಮಿಸಲಾದ ಮರದ ದಿಣ್ಣೆ ಕಾಲ್ನಡಿಗೆಯಲ್ಲಿ ಸಾಗುವವರಿಗೆ ಒಂದು ರೀತಿಯ ಭಯ ಹಾಗೂ ಆತಂಕದ ವಾತಾವರಣ ನಿರ್ಮಿಸಿದೆ. ಹೊಳಮಕ್ಕಿಯ ಕಾಲುಸಂಕದಲ್ಲಿ ಕೂಡ ಇದೇ ವಾತಾವರಣವಿದ್ದು, ದುರಂತಕ್ಕೆ ಆಹ್ವಾನಿಸುವಂತಿದೆ.
ಈ ಭಾಗದಲ್ಲಿ ಸುಮಾರು 200 ಕ್ಕೂ ಮಿಕ್ಕಿ ಜನ ವಾಸವಾಗಿದ್ದಾರೆ. 12 ಮನೆಗಳಿವೆ. ಶಾಲಾ ವಿದ್ಯಾರ್ಥಿಗಳು, ನೌಕರರು, ಕೂಲಿ ಕಾರ್ಮಿಕರು ನಿತ್ಯ ಪ್ರಯಾಣಿಕರು ಸುತ್ತಿ ಬಳಸಿ ಸಾಗುವ ರಸ್ತೆ ದಾರಿಯ ಬದಲು ಕಾಲು ಸಂಕ ಮಾರ್ಗವಾಗಿ ದೆ„ನಂದಿನ ಕೆಲಸ ಕಾರ್ಯಗಳಿಗೆ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಶಾಲಾ ಮಕ್ಕಳು ಮರದ ದಿಣ್ಣೆಯ ಮೇಲೆ ಸಾಗುವಾಗ ಆಕಸ್ಮಿಕವಾಗಿ ಆಯತಪ್ಪಿದಲ್ಲಿ ಹರಿಯುವ ಮಳೆಯ ನೀರಿನಲ್ಲಿ ಬಿದ್ದು ದುರಂತ ಸಂಭವಿಸುವ ಸಾಧ್ಯತೆ ಇದೆ. ಭದ್ರತೆ ಇಲ್ಲದ ಮರದ ದಿಣ್ಣೆಯ ಮಾರ್ಗವಾಗಿ ಹರಸಾಹಸಪಟ್ಟು ಸಾಗಬೇಕಾಗಿದೆ. ಇದಕ್ಕೊಂದು ಸೂಕ್ತ ಪರಿಹಾರ ಒದಗಿಸುವಲ್ಲಿ ಇಲಾಖೆ ಹಾಗೂ ಗ್ರಾ.ಪಂ ಕ್ರಮಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಈಗಾಗಲೇ ಗ್ರಾ.ಪಂ.ಗೆ ಗ್ರಾಮಸ್ಥರು ಮನವಿ ಸಲ್ಲಿಸಿರುತ್ತಾರೆ. ಎದುರಾದ ಸಮಸ್ಯೆ ನಿಭಾಯಿಸಲು ಕ್ರಮ ಕೈಗೊಳ್ಳಲಾಗುವುದು. ಕಾಲುಸಂಕದ ಎರಡು ಬದಿಯಲ್ಲಿ ಭದ್ರತೆಯ ನೆಲೆಯಲ್ಲಿ ದುರಂತ ಸಂಭವಿಸದಂತೆ ತಡೆಬೇಲಿ ನಿರ್ಮಿಸಲಾಗುವುದು. ಪೂರ್ಣ ಪ್ರಮಾಣದ ಕಾಮಗಾರಿಗೆ ಅನುದಾನದ ಕೊರತೆ, ಆರ್ಥಿಕ ಸಮಸ್ಯೆ ಎದುರಾಗಿದೆ. ಸಮೀಪದ ಜಾಗದವರೊಡನೆ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು.
-ವನಜಾಕ್ಷಿ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಜಡ್ಕಲ್