Advertisement

Holalkere: ತಾಲೂಕಿನಾದ್ಯಾಂತ ರಣಭೀಕರ ಮಳೆ; ರೈತರ ಮುಖದಲ್ಲಿ ಮಂದಹಾಸ

04:31 PM Aug 14, 2024 | Team Udayavani |

ಹೊಳಲ್ಕೆರೆ: ತಾಲೂಕಿನಾದ್ಯಾಂತ ಆ.14ರ ಬುಧವಾರ ಮುಂಜಾನೆ ಸುರಿದ ರಣಭೀಕರ ಮಳೆಗೆ ಹಲವಾರು ಕೆರೆಕಟ್ಟೆಗಳಿಗೆ, ಹೊಲಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Advertisement

ಕಳೆದ 3-4 ವರ್ಷಗಳಿಂದ ಸಮರ್ಪಕ ಮಳೆಯಿಲ್ಲದೆ ಕಂಗಾಲಾಗಿದ್ದ ಅಡಿಕೆ ಬೆಳೆಗಾರರು ಬುಧವಾರ ಮುಂಜಾನೆ ಸುರಿದ ಮಳೆಯಿಂದಾಗಿ ತೋಟ ಹೊಲಗದ್ದೆಗಳಲ್ಲಿ ನೀರು ಸಂಗ್ರಹವಾದ ಬೆನ್ನಲ್ಲೇ ರೈತರಲ್ಲಿ ಖುಷಿ ಇಮ್ಮಡಿಗೊಳಿಸಿದೆ.

ಭಾರೀ ಮಳೆಯಿಂದಾಗಿ ಹಲವಾರು ಹಳ್ಳಿಗಳಲ್ಲಿ ಕೆರೆಕಟ್ಟೆಗಳಿಗೆ ನೀರು ಹರಿದು ಬಂದಿದ್ದು, ಹೊಲ-ಗದ್ದೆಗಳಲ್ಲಿ ನಿರ್ಮಾಣ ಮಾಡಿದ್ದ ಕೃಷಿ ಹೊಂಡಗಳು, ಚೆಕ್ ಡ್ಯಾಮ್ ಗಳು ನೀರಿನಿಂದ ಭರ್ತಿಯಾಗಿ ತುಂಬಿ ಹರಿಯಲಾರಂಭಿಸಿವೆ.

ಹಲವಾರು ತೋಟಗಳಲ್ಲಿ ನೀರು ನಿಂತು ತೋಟವನ್ನು ಇನ್ನಷ್ಟು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವಂತೆ ಆಗಿರುವುದು ತೋಟಗಾರಿಕೆ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಕಳೆದ 10 ವರ್ಷಗಳ ಬಳಿಕ ಸುರಿದ ರಣಭೀಕರಣ ಮಳೆ ಹಿನ್ನೆಲೆ ಕೇವಲ ಅರ್ಧ ತಾಸಿನಲ್ಲೇ ಕೆರೆಕಟ್ಟೆಗಳು, ಹಳ್ಳ ಕೊಳ್ಳಗಳು ನೀರಿನಿಂದ ಭರ್ತಿಯಾಗಿ ಹೊರ ಚೆಲ್ಲಿವೆ. ಬಹುತೇಕ ಹೊಲ-ಗದ್ದೆಗಳಲ್ಲಿ ತೋಟಗಳಲ್ಲಿ ಸುಮಾರು 1-2 ಅಡಿಯಷ್ಟು  ನೀರು ಸಂಗ್ರಹವಾಗಿ ನಿಂತಿದೆ.

Advertisement

ಇದರಿಂದಾಗಿ ಕಳೆದ ಹತ್ತಾರು ವರ್ಷಗಳಿಂದ ಅಂತರ್ಜಲ ಕುಸಿತದಿಂದ ಬೆಂಡಾಗಿದ್ದ ಭೂಮಿಗೆ ಒಂದಿಷ್ಟು ಜೀವಕಳೆ ಬಂದಂತಾಗಿದೆ. ನೀರು ನಿಂತಿರುವ ಪರಿಣಾಮ ಕೊಳವೆ ಬಾವಿಗಳ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿದೆ.

ಹಲವಾರು ಕಡೆ ಬೆಳೆಗಳು ಮುಳುಗಡೆಯಾಗಿದ್ದು, ಒಂದಿಷ್ಟು ಬೆಳೆ ಹಾನಿ ಸಂಭವಿಸಿದೆ.

ಬುಧವಾರ ಮುಂಜಾನೆ 4.30 ರಿಂದ 6 ಗಂಟೆಯ ತನಕ ಸುರಿದ ರಣಭೀಕರ ಮಳೆ, ಕಳೆದ 20 ವರ್ಷಗಳಿಂದ ಬಂದಿಲ್ಲ. ಕೇವಲ ಅರ್ಧ ತಾಸಿನಲ್ಲಿ ಕೆರೆಕಟ್ಟೆಗಳು, ಕೃಷಿ ಹೊಂಡಗಳು ಭರ್ತಿಯಾಗಿರುವುದು ರೈತ ಸಮೂಹದಲ್ಲಿ ಸಂತಸ ಮೂಡಿಸಿದೆ. – ಈಚಘಟ್ಟ ಸಿದ್ದವೀರಪ್ಪ, ರೈತ ನಾಯಕರು

Advertisement

Udayavani is now on Telegram. Click here to join our channel and stay updated with the latest news.

Next