ಹೊಳಲ್ಕೆರೆ: ಹೊಳಲ್ಕೆರೆ ತಾಲ್ಲೂಕಿನ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿಯಿಂದ ಆಯೋಜಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅವ್ಯವಸ್ಥೆ ಖಂಡಿಸಿ ಹೊಳಲ್ಕೆರೆ ಪುರಸಭೆ ಸದಸ್ಯರಿಂದ ವೇದಿಕೆ ಮುಂಭಾಗ ಧರಣಿ ಸತ್ಯಾಗ್ರಹ. ತಹಶಿಲ್ದಾರರ ಟಿ.ರೇಖಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸರಿಯಾಗಿ ಅಯೋಜಿಸದೆ ಕನ್ನಡ ನಾಡು ನುಡಿ ಸಾಹಿತ್ಯ ಹಾಗೂ ಕನ್ನಡ ಜನರಿಗೆ ಅಪಮಾನ ಮಾಡಿದ್ದಾರೆ. ತಕ್ಷಣವೇ ತಹಶಿಲ್ದಾರರ ವಿರುದ್ಧ ಕ್ರಮ ಕೈಗೊಳ್ಳಲು ಮೂಲಕ ಅವರನ್ನು ಅಮಾನತ್ತುಗೊಳಿಸಬೇಕುಂದು ಆಗ್ರಹಿಸಿದ್ದಾರೆ.
ವೇದಿಕೆ ಮುಂಭಾಗ ಧರಣಿ ನೆಡೆಸಿದ ಸದಸ್ಯರು ತಾಲ್ಲೂಕಿನ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ವಸಂತ ರಾಜ್, ಬಿ.ಎಸ್.ರುದ್ರಪ್ಪ, ಸೈಯದ್ ಸಜೀಲ್, ಸೈಯದ್ ಮನ್ನೂರು, ವಿಜಯಸಿಂಹ ಖಟ್ರೋತ್, ಸವಿತನರಸಿಂಹ ಖಟ್ರೋತ್, ಮಮತ ನರಸಿಂಹ ಖಟ್ರೋತ್, ವಿಜಯ ಸಿಂಹ ಖಟ್ರೋತ್ ಹಲವಾರು ಕನ್ನಡಿಗರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಾಸನ ಎಂ.ಚಂದ್ರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ತಲೆಗೆಡಿಸಿಕೊಳ್ಳದೆ ಪ್ರತಿಭಟನೆ ನಡೆಸಿ ಆಕ್ರೋಶ.
ಇದನ್ನೂ ಓದಿ : ಗ್ರಾಹಕರಿಗೆ ಸಿಹಿ ಸುದ್ದಿ: ವಾಣಿಜ್ಯ ಬಳಕೆ 19 ಕೆಜಿ LPG ಸಿಲಿಂಡರ್ ಬೆಲೆ 115 ರೂ. ಇಳಿಕೆ