Advertisement

ಹಿರಿಯರ ಅನುಭವ ಸದ್ಭಳಕೆ ಮಾಡಿಕೊಳ್ಳಿ

02:53 PM Jul 21, 2019 | Naveen |

ಹೊಳಲ್ಕೆರೆ: ಇಂದಿನ ಯುವ ಪೀಳಿಗೆ ಹಿರಿಯರಲ್ಲಿರುವ ಅನುಭವ ಸಂಪತ್ತು ಸದ್ಭಳಕೆ ಮಾಡಿಕೊಂಡಾಗ ಮಾತ್ರ ಮೌಲ್ಯಯುತ್ತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ ಎಂದು ತಹಶೀಲ್ದಾರ್‌ ನಾಗರಾಜ್‌ ತಿಳಿಸಿದರು.

Advertisement

ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ತಾಲೂಕು ನಿವೃತ್ತ ನೌಕರರ ಸಂಘದ ಶನಿವಾರ ಆಯೋಜಿದ್ದ 21ನೇ ವಾರ್ಷಿಕೋತ್ಸವ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾಗರಿಕರ ಸಮಾಜದಲ್ಲಿರುವ ಪ್ರತಿಯೊಬ್ಬರು ಅನುಭವಿಗಳ ಮಾತುಗಳನ್ನು ಅರಿತುಕೊಳ್ಳಬೇಕು. ಜೀವಿತ ಕಾಲದಲ್ಲಿ ಸಾಕಷ್ಟು ಅನುಭವಗಳು ಹಿರಿಯಲ್ಲಿ ಕಾಣಲು ಸಾಧ್ಯ. ಅವರು ನೀಡುವ ಚಿಂತನೆಗಳು ಯಾವುದೇ ಪುಸ್ತಕರಲ್ಲಿ ಸಿಕ್ಕುವುದಿಲ್ಲ. ಸಾಮಾಜಿಕ ಬದಲಾವಣೆಗೆ ಹಿರಿಯ ಪಾತ್ರ ಸಾಕಷ್ಟು ಇದೆ. ಹಾಗಾಗಿ ಇಂದಿನ ಯುವಕರು ಹಿರಿಯನ್ನು ಗೌರವಿಸುವುದರ ಜತೆ ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಶ್ರೀ ಬಸವ ಪ್ರಶಸ್ತಿ ಪುರಸ್ಕೃತ ಜಿ.ಎನ್‌.ಬಸವರಾಜಪ್ಪ ಮಾತನಾಡಿ, ಬುದ್ಧ, ಬಸವಣ್ಣ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಮಹನ್‌ ತ್ಯಾಗಿಗಳು. ಅವರು ಸಮಾಜದ ಕಲ್ಯಾಣಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅವರ ಕಾಲಘಟ್ಟದಲ್ಲಿರುವಂತ ಸಾಮಾಜಿಕ ಶೋಷಣೆ ಕೊನೆಗಾಣಿಸಲು ಶ್ರಮಿಸಿದ್ದಾರೆ. ಅದರೆ ಈಗ ಕಾಲ ಬದಲಾಗಿದೆ. ಮೌಲ್ಯಗಳಿಗೆ ಮಾನ್ಯತೆ ಕುಸಿಯುತ್ತಿದೆ. ಹಾಗಾಗಿ ಯುವ ಜನಾಂಗಕ್ಕೆ ಮಾನವೀಯ ಮೌಲ್ಯಗಳ ಅರಿವು ಮೂಡಿಸಬೇಕು ಎಂದರು.

ಬಿಇಒ ಜಗದೀಶ್‌ ಮಾತನಾಡಿ, ಸರಕಾರಿ ನೌಕರರಿಗೆ ನಿವೃತ್ತಿ ಎನ್ನುವುದಿಲ್ಲ. ಸರಕಾರಿ ಕೆಲಸದಿಂದ ನಿವೃತ್ತಿ ಹೊಂದಿದ ತಕ್ಷಣ ಜೀವನವಿಲ್ಲ ಎನ್ನುವಂತಿಲ್ಲ. ಸರಕಾರಿ ನೌಕರರಾಗಿ ನಿವೃತ್ತಿ ಬಳಿಕವು ಉತ್ತಮ ಜನ ಸೇವೆ ಮಾಡಲು ಅವಕಾಶವಿದೆ. ನಮ್ಮಲ್ಲಿರುವ ಅನುಭವ ಸದ್ಬಳಕೆ ಮಾಡಿಕೊಂಡು ಜನರಿಗೆ ಮಾರ್ಗದರ್ಶನ ಮಾಡಲು ನಿವೃತ್ತ ನೌಕರರ ಸಂಘ ಸಹಕಾರಿಯಾಗಲಿದೆ ಎಂದರು.

Advertisement

ನಿವೃತ್ತ ನೌಕರರ ಸಂಘ ಮಾಜಿ ಅಧ್ಯಕ್ಷ ಎಚ್.ಶಿವಲಿಂಗಪ್ಪ ಮಾತನಾಡಿ, ಕಳೆದ 21 ವರ್ಷಗಳಿಂದ ಸಂಘ ನಿರಂತರವಾಗಿ ನಡೆದುಕೊಂಡು ಬಂದಿದೆ. ಸಂಘ ಸ್ಥಾಪನೆ ಬಳಿಕ ಸಂಘದ ಕಟ್ಟಡ ಕಟ್ಟಲು ಸಾಕಷ್ಟು ಶ್ರಮ ವಹಿಸಲಾಗಿದೆ. ನಿವೃತ್ತಿ ಬಳಿಕ ಮುಂದೇನು ಎನ್ನುವ ಚಿಂತನೆಗೆ ಇಲ್ಲದಂತೆ ಬದುಕು ನಡೆಸಲು ಸಂಘ ಸಹಕಾರಿಯಾಗಲಿದೆ. ನಿವೃತ್ತಿ ಬಳಿಕವೂ ಜನರೊಂದಿಗೆ ಬೆರೆತು ಜೀವನ ನಡೆಸಲು ಸಂಘದ ಯೋಜನೆಗಳು ಸಹಕಾರಿಯಾಗಲಿದೆ ಎಂದರು.

ತಾಲೂಕು ನಿವೃತ್ತ ನೌಕರರ ಸಂಘ ಅಧ್ಯಕ್ಷ ಎ.ಸಿ.ಗಂಗಾಧರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿವೃತ್ತ ನೌಕರರ ಸಂಘ ಪ್ರತಿ ವರ್ಷ ಹಲವಾರು ವಿನೂತನ ಕಾರ್ಯಕ್ರಮ ಕೈಗೊಂಡು ಸಾಮಾಜಿಕ ಪ್ರಗತಿಗೆ ಶ್ರಮಿಸುತ್ತಿದೆ. ಸಾರ್ವಜನಿಕರ ಆರೋಗ್ಯ ತಪಾಸಣೆ, ಪ್ರವಾಸ ಕಾರ್ಯಕ್ರಮಗಳು, ಮನರಂಜನಾ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಮಹತ್ಮರ ಜಯಂತಿಗಳ ಆಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮ ಕೈಗೊಂಡು ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು. ಶ್ರೀ ಬಸವ ಪ್ರಶಸ್ತಿ ಪುರಸ್ಕೃತ ಎನ್‌.ಬಿ.ಸಜ್ಜನ್‌, ಜಿ.ಎನ್‌.ಬಸವರಾಜಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಆರ್‌. ರಂಗಪ್ಪ ರೆಡ್ಡಿ, ಹಿರಿಯೂರು ತಾಲೂಕು ಅಧ್ಯಕ್ಷ ವೀರಣ್ಣ, ಚಳ್ಳಕೆರೆ ಅಧ್ಯಕ್ಷ ಎಂ.ಕರಿಯಪ್ಪ, ಹೊಸದುರ್ಗ ಅಧ್ಯಕ್ಷ ಜಿ.ಕೆ. ನೇಮಿರಾಜ್‌, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಣ್ಣ, ಜಿಲ್ಲಾ ಪತ್ರಿನಿಧಿ ಕೆ.ಎಸ್‌.ಜಯಪ್ಪ, ಮೊಳಕಾಲ್ಮೂರು ಅಧ್ಯಕ್ಷ ಎಸ್‌.ಟಿ.ಬ್ರಹ್ಮಾನಂದ, ಪ್ರಧಾನ ಕಾರ್ಯದರ್ಶಿ ಬಿ.ಮಲ್ಲೇಶಪ್ಪ, ಕೋಶಾಧ್ಯಕ್ಷ ಜಿ.ಎಸ್‌. ನಾಗರಾಜ್‌ರಾವ್‌ ಮಾತನಾಡಿದರು. ನಂಜಪ್ಪ, ಕೆ.ಎಸ್‌.ಸಿದ್ದಪ್ಪ, ಜಿ.ಈ.ಯತಿರಾಜ್‌ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next