Advertisement

ಕೋವಿಡ್ ಪರಿಹಾರ ನಿಧಿಗೆ 50ಲಕ್ಷ ದೇಣಿಗೆ

04:51 PM May 01, 2020 | Naveen |

ಹೊಳಲ್ಕೆರೆ: ಕೋವಿಡ್ ಪರಿಹಾರ ನಿಧಿಗೆ ಶಾಸಕ ಎಂ. ಚಂದ್ರಪ್ಪ 50 ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ದೇಣಿಗೆ ಚೆಕ್‌ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಯುವ ಐಕಾನ್‌ ಪ್ರಶಸ್ತಿ ಪುರಸ್ಕೃತ ರಘುಚಂದನ್‌ ಇದ್ದರು.

Advertisement

ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಚಂದ್ರಪ್ಪ, ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ದೇಶವನ್ನು ಲಾಕ್‌ಡೌನ್‌ ಮಾಡಲಾಗಿದೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗದಂತೆ ಹಾಗೂ ದೇಶದ ನಾಗರಿಕರ ರಕ್ಷಣೆ ದೃಷ್ಟಿಯಿಂದ ವೈಯಕ್ತಿಕವಾಗಿ 50 ಲಕ್ಷ ರೂ. ಗಳನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿರುವುದಾಗಿ ತಿಳಿಸಿದರು. ಇಂದು ವಿಶ್ವವೇ ಕೋವಿಡ್ ವೈರಸ್‌ ಸೋಂಕಿನಲ್ಲಿ ಸಿಲುಕಿಕೊಂಡಿದೆ. ನಮ್ಮ ದೇಶದಲ್ಲಿ ಪ್ರಧಾನಿ ಮೋದಿ ದೇಶವನ್ನು ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜ್ಯವನ್ನು ಲಾಕ್‌ ಡೌನ್‌ ಮಾಡುವ ಮೂಲಕ ದೇಶ ಹಾಗೂ ರಾಜ್ಯದ ಜನರ ರಕ್ಷಣೆ ಬೇಕಾದ ಎಲ್ಲಾ ಮಾದರಿಯ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅವರ ಆಡಳಿತದಲ್ಲಿ ಆರ್ಥಿಕ ಸಂಕಷ್ಟ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಶಾಸಕರಾದ ನಮ್ಮ ಕರ್ತವ್ಯ. ಹಾಗಾಗಿ ಕೈಲಾದಷ್ಟು ಆರ್ಥಿಕ ಸಹಕಾರ ನೀಡಿ ರಾಜ್ಯವನ್ನು ಕೋವಿಡ್ ವೈರಸ್‌ ಸೋಂಕಿನಿಂದ ಪಾರು ಮಾಡಲು ಶ್ರಮಿಸುತ್ತಿದ್ದೇನೆ. ಅಗತ್ಯವಿದ್ದಲ್ಲಿ ಇನ್ನಷ್ಟು ಧನಸಹಾಯ ಮಾಡಲು ಬದ್ಧನಾಗಿದ್ದೇನೆ ಎಂದರು.

ಕಳೆದ ವರ್ಷ ರಾಜ್ಯದಲ್ಲಿ ಸೃಷ್ಟಿಯಾಗಿದ್ದ ನೆರೆ ಹಾವಳಿಗೆ ಸಿಕ್ಕಿಕೊಂಡಿರುವವರನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಅಂದು ಕೂಡ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಗೆ 1.42 ಕೋಟಿ ರೂ.ಗಳನ್ನು ವೈಯಕ್ತಿಕವಾಗಿ ನೀಡಿದ್ದೆ. ದೇಶಕ್ಕಾಗಿ ನಾನು ಎನ್ನುವ ಮೂಲಕ ಬದುಕು ಕಟ್ಟಿಕೊಳ್ಳಬೇಕಾಗಿದೆ. ದೇಶ, ರಾಜ್ಯ, ಜನರಿದ್ದಲ್ಲಿ ಮಾತ್ರ ಜನಪ್ರತಿನಿಧಿ ಎನ್ನುವ ಸತ್ಯವನ್ನು ಅರಿತುಕೊಂಡಿದ್ದೇನೆ. ಕ್ಷೇತ್ರದ ಜನರಿಗೂ ನಮ್ಮ ಆಭಿಮಾನಿ ಬಳಗದ ಮೂಲಕ ಅಗತ್ಯ ವಸ್ತುಗಳನ್ನುಪೂರೈಕೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next