Advertisement
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಗ್ರಾಮೀಣ ಭಾಗದಲ್ಲಿ ಅಭೂತಪೂರ್ವ ರೀತಿ ಆಚರಿಸಲು ಹಳ್ಳಿ-ಹಳ್ಳಿಗಳಲ್ಲೂ ಹರ್ ಘರ್ ತಿರಂಗಾ ಸಹಿತ ಹಲವು ಕಾರ್ಯಕ್ರಮಗಳನ್ನು ರೂಪಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೆರೆಗಳ ಬಳಿ ಧ್ವಜಾರೋಹಣ ನೆರವೇರಿಸುವ ವಿನೂತನ ಕಾರ್ಯಕ್ರಮ ಹಾಕಿಕೊಂಡಿದೆ.
ಧ್ವಜಾರೋಹಣವನ್ನು ರಾಜಕಾರಣಿಗಳು, ಚುನಾಯಿತ ಜನಪ್ರತಿನಿಧಿಗಳು ನೆರವೇರಿಸು ವುದಿಲ್ಲ. ಇದನ್ನು ಜನರ ಕಾರ್ಯಕ್ರಮವನ್ನಾಗಿ ಮಾಡಲು ಆಯಾ ಜಿಲ್ಲೆ, ಪಂಚಾಯತ್ ಅಥವಾ ಗ್ರಾಮದ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರರು, ಅವರ ಕುಟುಂಬದ ಸದಸ್ಯರು, ಹುತಾತ್ಮರ ಕುಟುಂಬದ ಸದಸ್ಯರು, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸಹಿತ ಇತರ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದವರು ಧ್ವಜಾರೋಹಣ ನೆರವೇರಿಸುವರು. ಇಂಥವರು ಇಲ್ಲದ ಕಡೆಗಳಲ್ಲಿ ಗ್ರಾಮದ ಹಿರಿಯರೊಬ್ಬರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related Articles
ಕೆರೆಗಳ ಅಭಿವೃದ್ಧಿ ಮತ್ತು ಅಮೃತ ಸರೋವರ ನಿರ್ಮಾಣ ಕಾರ್ಯಕ್ರಮಗಳಿಗೆ ನರೇಗಾ ಯೋಜನೆ, 15ನೇ ಹಣಕಾಸು ಆಯೋಗದ ಅನುದಾನ, ಕೇಂದ್ರ, ರಾಜ್ಯ, ಜಿ.ಪಂ.-ತಾ.ಪಂ.ಗಳಲ್ಲಿ ವಿವಿಧ ಯೋಜನೆಗಳಡಿ ಲಭ್ಯವಿರುವ ಅನುದಾನ, ಸಣ್ಣ ನೀರಾವರಿ ಇಲಾಖೆ, ಅಟಲ್ ಭೂಜಲ್ ಅನುದಾನ, ಸಿಎಸ್‌ಆರ್ ನಿಧಿ, ಆರ್ಥಿಕ ದೇಣಿಗೆ, ಸಾರ್ವಜನಿಕರ ವಂತಿಕೆ ಮೂಲಕ ಹಣ ಬಳಕೆ ಮಾಡಬಹುದು. ಯಂತ್ರಗಳನ್ನು ಬಳಸುವ ಕಾಮಗಾರಿಗಳಿಗೆ ರಾಜ್ಯ ಸರಕಾರ ಬಜೆಟ್‌ನಲ್ಲಿ ಘೋಷಿಸಿರುವ 100 ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಬಹುದು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.
Advertisement
ಈ ಅಭಿಯಾನದಲ್ಲಿ ಕನಿಷ್ಠ 2,325 ಕೊಳಗಳನ್ನು ರಾಜ್ಯದಲ್ಲಿ ಕಾಯಕಲ್ಪ ನೀಡಲಾಗುವುದು. ಇದು ಸಮುದಾಯ ಸಹಭಾಗಿತ್ವದ ಪ್ರಯತ್ನವಾಗಿದೆ. ಇದು ರಾಷ್ಟ್ರದ 75ನೇ ಸ್ವಾತಂತ್ರÂದ ಸಂದರ್ಭದಲ್ಲಿ ನರೇಗಾ ಯೋಜನೆಯ ಹೆಮ್ಮೆಯ ಕೊಡುಗೆಯಾಗಿದ್ದು, ಆಗಸ್ಟ್ 15 ರಂದು 465 ಕೆರೆಗಳ ಬಳಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ.– ಶಿಲ್ಪಾ ನಾಗ್, ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ.