Advertisement

ಇಂದು ಸಂಜೆ ಹಾಕಿ ವಿಶ್ವ ಕಪ್‌ ಉದ್ಘಾಟನೆ

06:15 AM Nov 27, 2018 | |

ಭುವನೇಶ್ವರ: 14ನೇ ಹಾಕಿ ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಒಡಿಶಾದ ರಾಜಧಾನಿ ಭುವನೇಶ್ವರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಈ ಕೂಟದ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಲಿರುವ ಕಾರಣ ಒಡಿಶಾ ಸರಕಾರ ಭುವನೇಶ್ವರದ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದೆ.

Advertisement

“ರಾಜಧಾನಿಯಲ್ಲಿರುವ ಎಲ್ಲ ಶಾಲಾ-ಕಾಲೇಜುಗಳಿಗೂ ಪೂರ್ತಿ ದಿನ ರಜೆ ಘೋಷಿಸಲಾಗಿದೆ. ರಾಜ್ಯದ ಉಳಿದ ಶಾಲೆ, ಕಾಲೇಜುಗಳಗೆ ಅಪರಾಹ್ನ ರಜೆ ನೀಡಲಾಗಿದೆ’ ಎಂದು ಒಡಿಶಾ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೀತಿ ರಾಜ್ಯದಲ್ಲಿರುವ ಎಲ್ಲ ಸರಕಾರಿ ಕಚೇರಿಗಳು ಅಪರಾಹ್ನ 1.30ರ ತನಕ ಮಾತ್ರ ಕಾರ್ಯ ನಿರ್ವಹಿಸಲಿವೆ. ಬುಧವಾರ ಹಾಕಿ ವಿಶ್ವಕಪ್‌ನ “ಆಚರಣಾ ಸಮಾರಂಭ ಕೂಟ’ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರಕಾರಿ ಕಚೇರಿಗಳು 1.30 ಅನಂತರ ಮುಚ್ಚಲಿದೆ ಎಂದು ಸರಕಾರ ತಿಳಿಸಿದೆ.

*ಬಾಲಿವುಡ್‌ ಬಾದ್‌ಶಾನಿಂದ ಮನರಂಜನೆ
ಬುಧವಾರ ಕಳಿಂಗ ಸ್ಟೇಡಿಯಂನಲ್ಲಿ  ವಿಶ್ವಕಪನ್‌ ಪಂದ್ಯಾವಳಿ ಆರಂಭವಾದರೂ, ಉದ್ಘಾಟನಾ ಸಮಾರಂಭ ಮಾತ್ರ ಮಂಗಳವಾರ ಸಂಜೆ ನೆರವೇರಲಿದೆ. ಬಾಲಿವುಡ್‌ ಬಾದ್‌ಶಾ ಶಾರೂಕ್‌ ಖಾನ್‌, ಮಾಧುರಿ ದೀಕ್ಷಿತ್‌, ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್‌ ಪ್ರಮುಖ ತಾರಾ ಆಕರ್ಷಣೆಯಾಗಲಿದ್ದಾರೆ. ಒಡಿಶಾ ತಾರೆಗಳೂ ಭಾಗವಹಿಸಲಿದ್ದಾರೆ. ರೆಹಮಾನ್‌ ಹಾಗೂ ಇನ್ನಿತರ ನಟರು ಬುಧವಾರ ಬಾರಾಬತಿ ಸ್ಟೇಡಿಯಂನಲ್ಲೂ ಮನರಂಜನೆ ನೀಡಲಿದ್ದಾರೆ.

ವಿಶ್ವಕಪ್‌ ಹಾಕಿ: ಲೀಗ್‌ ಪಂದ್ಯಗಳ ವೇಳಾಪಟ್ಟಿ
ಗ್ರೂಪ್‌ “ಎ’:
ಆರ್ಜೆಂಟೀನಾ, ನ್ಯೂಜಿಲ್ಯಾಂಡ್‌, ಸ್ಪೇನ್‌, ಫ್ರಾನ್ಸ್‌
ಗ್ರೂಪ್‌ “ಬಿ’: ಆಸ್ಟ್ರೇಲಿಯ, ಇಂಗ್ಲೆಂಡ್‌, ಐರ್ಲೆಂಡ್‌, ಚೀನ
ಗ್ರೂಪ್‌ “ಸಿ’: ಬೆಲ್ಜಿಯಂ, ಭಾರತ, ಕೆನಡಾ, ದಕ್ಷಿಣ ಆಫ್ರಿಕಾ
ಗ್ರೂಪ್‌ “ಡಿ’: ನೆದರ್ಲೆಂಡ್‌, ಜರ್ಮನಿ, ಮಲೇಶ್ಯ, ಪಾಕಿಸ್ಥಾನ

ದಿನಾಂಕ    ಪಂದ್ಯ    ಆರಂಭ
ನ. 28    ಬೆಲ್ಜಿಯಂ-ಕೆನಡಾ    ಸಂಜೆ 5.00
ನ. 28    ಭಾರತ-ದಕ್ಷಿಣ ಆಫ್ರಿಕಾ    ಸಂಜೆ 7.00
ನ. 29    ಆರ್ಜೆಂಟೀನಾ-ಸ್ಪೇನ್‌    ಸಂಜೆ 5.00
ನ. 29    ನ್ಯೂಜಿಲ್ಯಾಂಡ್‌-ಫ್ರಾನ್ಸ್‌    ಸಂಜೆ 7.00
ನ. 30    ಆಸ್ಟ್ರೇಲಿಯ-ಐರ್ಲೆಂಡ್‌    ಸಂಜೆ 5.00
ನ. 30    ಇಂಗ್ಲೆಂಡ್‌-ಚೀನ    ಸಂಜೆ 7.00
ಡಿ. 1    ನೆದರ್ಲೆಂಡ್‌-ಮಲೇಶ್ಯ    ಸಂಜೆ 5.00
ಡಿ. 1    ಜರ್ಮನಿ-ಪಾಕಿಸ್ಥಾನ    ಸಂಜೆ 7.00
ಡಿ. 2    ಕೆನಡಾ-ದಕ್ಷಿಣ ಆಫ್ರಿಕಾ    ಸಂಜೆ 5.00
ಡಿ. 2    ಭಾರತ-ಬೆಲ್ಜಿಯಂ    ಸಂಜೆ 7.00
ಡಿ. 3    ಸ್ಪೇನ್‌-ಫ್ರಾನ್ಸ್‌    ಸಂಜೆ 5.00
ಡಿ. 3    ನ್ಯೂಜಿಲ್ಯಾಂಡ್‌-ಆರ್ಜೆಂಟೀನಾ    ಸಂಜೆ 7.00
ಡಿ. 4    ಇಂಗ್ಲೆಂಡ್‌-ಆಸ್ಟ್ರೇಲಿಯ    ಸಂಜೆ 5.00
ಡಿ. 4    ಐರ್ಲೆಂಡ್‌-ಚೀನ    ಸಂಜೆ 7.00
ಡಿ. 5    ಜರ್ಮನಿ-ನೆದರ್ಲೆಂಡ್‌    ಸಂಜೆ 5.00
ಡಿ. 5    ಮಲೇಶ್ಯ-ಪಾಕಿಸ್ಥಾನ    ಸಂಜೆ 7.00
ಡಿ. 6    ಸ್ಪೇನ್‌-ನ್ಯೂಜಿಲ್ಯಾಂಡ್‌    ಸಂಜೆ 5.00
ಡಿ. 6    ಆರ್ಜೆಂಟೀನಾ-ಫ್ರಾನ್ಸ್‌    ಸಂಜೆ 7.00
ಡಿ. 7    ಆಸ್ಟ್ರೇಲಿಯ-ಚೀನ    ಸಂಜೆ 5.00
ಡಿ. 7    ಐರ್ಲೆಂಡ್‌-ಇಂಗ್ಲೆಂಡ್‌    ಸಂಜೆ 7.00
ಡಿ. 8    ಬೆಲ್ಜಿಯಂ-ದಕ್ಷಿಣ ಆಫ್ರಿಕಾ    ಸಂಜೆ 5.00
ಡಿ. 8    ಭಾರತ-ಕೆನಡಾ    ಸಂಜೆ 7.00
ಡಿ. 9    ಮಲೇಶ್ಯ-ಜರ್ಮನಿ    ಸಂಜೆ 5.00
ಡಿ. 9    ನೆದರ್ಲೆಂಡ್‌-ಪಾಕಿಸ್ಥಾನ    ಸಂಜೆ 7.00

Advertisement
Advertisement

Udayavani is now on Telegram. Click here to join our channel and stay updated with the latest news.

Next