Advertisement

ಇಂಗ್ಲೆಂಡಿಗೆ ಗೆಲವು ನಿರಾಕರಿಸಿದ ಚೀನ

06:35 AM Dec 01, 2018 | |

ಭುವನೇಶ್ವರ: ಹಾಕಿಯಲ್ಲಿ ಅಷ್ಟೇನೂ ಪರಿಣತಿ ಹೊಂದಿಲ್ಲದ ಚೀನ, ಶುಕ್ರವಾರದ ವಿಶ್ವಕಪ್‌ ಪಂದ್ಯದಲ್ಲಿ ಇಂಗ್ಲೆಂಡಿಗೆ ಗೆಲುವು ನಿರಾಕರಿಸಿ ಗೆದ್ದಷ್ಟೇ ಸಂಭ್ರಮ ಆಚರಿಸಿದೆ. ಈ ಪಂದ್ಯ 2-2 ಅಂತರದಿಂದ ಡ್ರಾಗೊಂಡಿತು.

Advertisement

5ನೇ ನಿಮಿಷದಲ್ಲೇ ಗೋಲು ಸಿಡಿಸಿದ ಕ್ಸಿಯೋಪಿಂಗ್‌ ಗುವೊ ಚೀನಕ್ಕೆ ಮುನ್ನಡೆ ತಂದಿತ್ತರೆ, ಪಂದ್ಯದ ಮುಕ್ತಾಯಕ್ಕೆ ಇನ್ನೇನು ಒಂದೇ ನಿಮಿಷ ಇರುವಾಗ ತಲಾಕೆ ಡು ಪೆನಾಲ್ಟಿ ಕಾರ್ನರ್‌ ಗೋಲಿನ ಮೂಲಕ ಪಂದ್ಯಕ್ಕೆ ಡ್ರಾ ಮುದ್ರೆ ಒತ್ತಿದರು. ಇಂಗ್ಲೆಂಡಿನ 2 ಗೋಲುಗಳು ಮಾರ್ಕ್‌ ಗ್ಲೆಗೋರ್ನ್ (14ನೇ ನಿಮಿಷ) ಮತ್ತು ಲಿಯಮ್‌ ಅನ್ಸೆಲ್‌ (48ನೇ ನಿಮಿಷ) ಅವರಿಂದ ದಾಖಲಾದವು.

Advertisement

Udayavani is now on Telegram. Click here to join our channel and stay updated with the latest news.

Next