Advertisement

ಹಾಕಿ ವಿಶ್ವಕಪ್‌: ಪಂದ್ಯಗಳನ್ನು ಫಿಕ್ಸ್‌ ಮಾಡಿತ್ತೇ ಬೆಲ್ಜಿಯಂ?

12:30 AM Jan 17, 2019 | |

ಹೊಸದಿಲ್ಲಿ: ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡ ಹಾಕಿ ವಿಶ್ವಕಪ್‌ ಪ್ರಶಸ್ತಿ ಜಯಿಸಿದ ಬೆಲ್ಜಿಯಂ ತಂಡ ಸದ್ಯ ಬೆಟ್ಟಿಂಗ್‌ ವಿವಾದದಲ್ಲಿ ಸಿಲುಕಿಕೊಂಡಿದೆ.

Advertisement

ಬೆಲ್ಜಿಯಂ ತಂಡ ಆಡಿರುವ 20 ಪಂದ್ಯಗಳಲ್ಲಿ  ತಂಡದ ಆಟಗಾರರು ಹಾಗೂ ಸದಸ್ಯರನ್ನು ಬೆಟ್ಟಿಂಗ್‌ ನಡೆಸುವ ವ್ಯಕ್ತಿಗಳು ಸಂಪರ್ಕಿಸಿದ್ದಾರೆ ಎಂದು ಬೆಲ್ಜಿಯಂನ ಸುದ್ದಿವಾಹಿನಿಯೊಂದು ಪ್ರಕಟಿಸಿದೆ. ಈ ಮಾಹಿತಿಯಂತೆ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ (ಎಫ್ಐಎಚ್‌) ತನಿಖೆ ಆರಂಭಿಸಿದೆ.

ಈ ಕುರಿತಂತೆ ಬೆಲ್ಜಿಯಂ ತಂಡದ ನಾಯಕ ಥಾಮಸ್‌ ಬ್ರಿಲೇಸ್‌ ಹಾಗೂ ಬೆಲ್ಜಿಯಂ ಹಾಕಿ ಅಸೋಸಿಯೇಶನ್‌ನ ಮಾರ್ಕೆಟಿಂಗ್‌ ಹಾಗೂ ಸಂವಹನ ನಿರ್ದೇಶಕ ಡೆವಿನ್‌ ವಾನ್‌ ಡ್ಯಾಮ್‌ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

“ವಾಹಿನಿಯಲ್ಲಿ ಬಂದ ಸುದ್ದಿಯಂತೆ ಬೆಲ್ಜಿಯಂ ಹಾಕಿ ಅಸೋಸಿಯೇಶನ್‌ ಅನ್ನು ಸಂಪರ್ಕಿಸಲಾಗಿದ್ದು, ಈ ವಿಷಯವನ್ನು ಸಂಪೂರ್ಣ ಸಹಕಾರ ಹಾಗೂ ಪಾರದರ್ಶಕತೆಯಿಂದ ಇತ್ಯರ್ಥ ಮಾಡುತ್ತೇವೆ ಎಂಬ ನಂಬಿಕೆ ಇದೆ’ ಎಂದು ಎಫ್ಐಎಚ್‌ನ ಹಿರಿಯ ಸಂವಹನ ವ್ಯವಸ್ಥಾಪಕ ನಿಕೋಲಸ್‌ ಮಾಯಿಂಗ್ಟ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next