Advertisement

ಕಿರಿಯರ ಮಹಿಳಾ ಹಾಕಿ ವಿಶ್ವಕಪ್‌: ಭಾರತಕ್ಕೆ ಜಯ

10:17 PM Apr 05, 2022 | Team Udayavani |

ಪೊಚೆಫ್ಸ್ಟ್ರೊಮ್‌: ಮುಮ್ತಾಜ್‌ ಖಾನ್‌ ಅವರ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಭಾರತೀಯ ವನಿತಾ ಹಾಕಿ ತಂಡವು ಎಫ್ಐಎಚ್‌ ಕಿರಿಯರ ವಿಶ್ವಕಪ್‌ ಹಾಕಿ ಕೂಟದಲ್ಲಿ ಮಲೇಷ್ಯಾ ತಂಡವನ್ನು 4-0 ಗೋಲುಗಳಿಂದ ಸೋಲಿಸಿ ತನ್ನ ಬಣದಲ್ಲಿ ಅಜೇಯ ದಾಖಲೆ ಮಾಡಿದೆ.

Advertisement

ಈಗಾಗಲೇ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದ ಭಾರತವು ಈ ಪಂದ್ಯದಲ್ಲಿ ನಾಲ್ಕು ಫೀಲ್ಡ್‌ ಗೋಲುಗಳನ್ನು ಬಾರಿಸಿ ಗಮನ ಸೆಳೆದಿದೆ.

ಇದರಲ್ಲಿ ಮೂರು ಗೋಲನ್ನು ಮುಮ್ತಾಜ್‌ ಅನುಕ್ರಮವಾಗಿ 10, 26 ಮತ್ತು 59ನೇ ನಿಮಿಷದಲ್ಲಿ ಹೊಡೆದಿದ್ದರು.

ಇನ್ನೊಂದು ಗೋಲನ್ನು ಸಂಗೀತಾ ಕುಮಾರಿ 11ನೇ ನಿಮಿಷದಲ್ಲಿ ಹೊಡೆದಿದ್ದರು. ಈ ಗೆಲುವಿನಿಂದಾಗಿ ಭಾರತವು “ಡಿ’ ಬಣದಲ್ಲಿ ತಾನಾಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಗರಿಷ್ಠ 9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು.

ಇದನ್ನೂ ಓದಿ:ಹಾವೇರಿ : ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತು ಮಹಿಳೆ ಸಾವು, ವಿದ್ಯುತ್ ಕಂಬ, ಮರಗಳು ಧರೆಗೆ

Advertisement

ಭಾರತವು ಈ ಹಿಂದಿನ ಪಂದ್ಯಗಳಲ್ಲಿ ವೇಲ್ಸ್‌ 5-1 ಮತ್ತು ಜರ್ಮನಿ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿತ್ತು. ಭಾರತವು ಶುಕ್ರವಾರ ನಡೆಯುವ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕೊರಿಯ ತಂಡವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next