Advertisement

Hockey Series: ಭಾರತದ ಜಂಬೋ ತಂಡ

12:11 AM Jan 11, 2024 | Team Udayavani |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಆಡಲಾಗುವ 4 ರಾಷ್ಟ್ರಗಳ ಹಾಕಿ ಸರಣಿಗೆ ಭಾರತ ಜಂಬೋ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಬರೋಬ್ಬರಿ 26 ಆಟಗಾರರಿದ್ದಾರೆ!

Advertisement

ಕೇಪ್‌ಟೌನ್‌ನಲ್ಲಿ ಜ. 22ರಂದು ಆರಂಭವಾಗಲಿರುವ ಈ ಸರಣಿಯಲ್ಲಿ ಸೆಣಸಲಿರುವ ಉಳಿದ ತಂಡಗಳೆಂದರೆ ಫ್ರಾನ್ಸ್‌, ನೆದರ್ಲೆಂಡ್ಸ್‌ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ. ಪ್ಯಾರಿಸ್‌ ಒಲಿಂಪಿಕ್ಸ್‌ ಹಿನ್ನೆಲೆಯಲ್ಲಿ ಈ ಪಂದ್ಯಾವಳಿ ಹಾಕಿ ಪಟುಗಳ ಸಾಮರ್ಥ್ಯ ಪರೀಕ್ಷೆಗೊಂದು ವೇದಿಕೆ ಆಗಲಿದೆ.

ಮಾಜಿ ನಾಯಕ ಮನ್‌ಪ್ರೀತ್‌ ಸಿಂಗ್‌ ಸುದೀರ್ಘ‌ ಬ್ರೇಕ್‌ ಬಳಿಕ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಹರ್ಮನ್‌ಪ್ರೀತ್‌ ಸಿಂಗ್‌ ತಂಡವನ್ನು ಮುನ್ನಡೆಸಲಿದ್ದಾರೆ. ಹಾರ್ದಿಕ್‌ ಸಿಂಗ್‌ ಉಪನಾಯಕ. ಜೂನಿಯರ್‌ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಅರ್ಜೀತ್‌ ಸಿಂಗ್‌, ಬಾಬಿ ಸಿಂಗ್‌ ಧಾಮಿ ಅವರನ್ನು ಸೀನಿಯರ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

“ಇದು ಒಲಿಂಪಿಕ್‌ ವರ್ಷ. ಆರಂಭದಲ್ಲೇ ನಾವು ಕೆಲವು ಬಲಿಷ್ಠ ತಂಡಗಳ ವಿರುದ್ಧ ಸ್ಪರ್ಧೆ ನಡೆಸಲಿದ್ದೇವೆ. ತಂಡಕ್ಕೆ ಇಬ್ಬರು ಜೂನಿಯರ್‌ ಆಟಗಾರರನ್ನೂ ಸೇರಿಸಿಕೊಂಡಿದ್ದೇವೆ. ಇವರ ಆಟವನ್ನು ಆಸಕ್ತಿಯಿಂದ ಗಮನಿಸಲಾಗುವುದು” ಎಂಬುದಾಗಿ ಕೋಚ್‌ ಕ್ರೆಗ್‌ ಫ‌ುಲ್ಟನ್‌ ಹೇಳಿದ್ದಾರೆ.

ಭಾರತ ತಂಡ
ಗೋಲ್‌ಕೀಪರ್: ಪಿ.ಆರ್‌. ಶ್ರೀಜೇಶ್‌, ಕೃಷ್ಣ ಬಹಾದೂರ್‌ ಪಾಠಕ್‌, ಪವನ್‌.
ಡಿಫೆಂಡರ್: ಜರ್ಮನ್‌ಪ್ರೀತ್‌ ಸಿಂಗ್‌, ಜುಗ್ರಾಜ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಹರ್ಮನ್‌ಪ್ರೀತ್‌ ಸಿಂಗ್‌ (ನಾಯಕ), ವರುಣ್‌ ಕುಮಾರ್‌, ಸುಮಿತ್‌, ಸಂಜಯ್‌, ರಬಿಚಂದ್ರ ಸಿಂಗ್‌ ಎಂ.
ಮಿಡ್‌ಫಿಲ್ಡರ್: ವಿವೇಕ್‌ ಸಾಗರ್‌ ಪ್ರಸಾದ್‌, ನೀಲಕಂಠ ಶರ್ಮ, ರಾಜ್‌ಕುಮಾರ್‌ ಪಾಲ್‌, ಶಮ್ಶೆರ್‌ ಸಿಂಗ್‌, ವಿಷ್ಣುಕಾಂತ್‌ ಸಿಂಗ್‌, ಹಾರ್ದಿಕ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌.
ಫಾರ್ವರ್ಡ್ಸ್‌: ಮನ್‌ದೀಪ್‌ ಸಿಂಗ್‌, ಅಭಿಷೇಕ್‌, ಸುಖ್‌ಜೀತ್‌ ಸಿಂಗ್‌, ಗುರ್ಜಂತ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಆಕಾಶ್‌ದೀಪ್‌ ಸಿಂಗ್‌, ಅರ್ಜೀತ್‌ ಸಿಂಗ್‌ ಹುಂಡಾಲ್‌,
ಬಾಬಿ ಸಿಂಗ್‌ ಧಾಮಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next