Advertisement

ಹಾಕಿ: ಇಂದಿನಿಂದ ಭಾರತಕ್ಕೆ ಒಲಿಂಪಿಕ್‌ ಅರ್ಹತಾ ಸವಾಲು

08:26 AM Nov 02, 2019 | Team Udayavani |

ಭುವನೇಶ್ವರ: ಭಾರತದ ಹಾಕಿ ತಂಡಗಳು ಟೋಕಿಯೊ ಒಲಿಂಪಿಕ್‌ ಅರ್ಹತೆಯಿಂದ ಎರಡೇ ಪಂದ್ಯಗಳಷ್ಟು ದೂರ ಇವೆ. ಶುಕ್ರವಾರ ಮತ್ತು ಶನಿವಾರ ಇಲ್ಲಿನ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆಯುವ ಪುರುಷರ ಸ್ಪರ್ಧೆಯಲ್ಲಿ ಭಾರತ ಕೆಳ ಕ್ರಮಾಂಕದ ರಶ್ಯ ವಿರುದ್ಧ ಸೆಣಸಲಿದೆ. ಆದರೆ ವನಿತೆಯರಿಗೆ ಕಠಿನ ಸವಾಲು ಎದುರಾಗುವ ಸಾಧ್ಯತೆ ಇದ್ದು, ರಾಣಿ ರಾಮ್‌ಪಾಲ್‌ ಪಡೆ ಅಮೆರಿಕವನ್ನು ಎದುರಿಸಲಿದೆ.

Advertisement

5ನೇ ರ್‍ಯಾಂಕಿಂಗ್‌ನ ಮನ್‌ಪ್ರೀತ್‌ ಪಡೆಗೆ 22ನೇ ಸ್ಥಾನದಲ್ಲಿರುವ ರಶ್ಯದಿಂದ ಭಾರೀ ಸವಾಲು ಎದುರಾಗಲಿಕ್ಕಿಲ್ಲ ಎಂಬುದೊಂದು ಲೆಕ್ಕಾಚಾರ. ಜತೆಗೆ ಭಾರತದ ರಕ್ಷಣಾ ವಿಭಾಗವೀಗ ಹೆಚ್ಚು ಬಲಿಷ್ಠವಾಗಿದೆ. ಸುರೇಂದರ್‌ ಕುಮಾರ್‌ ಮತ್ತು ಜೂನಿಯರ್‌ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಹರ್ಮನ್‌ಪ್ರೀತ್‌ ಸಿಂಗ್‌ ಈ ವಿಭಾಗದ ಪ್ರಮುಖರಾಗಿದ್ದಾರೆ.

ಅಮೆರಿಕ ಹೆಚ್ಚು ಬಲಿಷ್ಠ
ನಿಜವಾದ ಸಮಸ್ಯೆ ಎದುರಾಗಿರುವುದು ಭಾರತದ ವನಿತೆಯರಿಗೆ. 13ನೇ ರ್‍ಯಾಂಕಿಂಗ್‌ ತಂಡವಾಗಿರುವ ಅಮೆರಿಕ ಭಾರತಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಇತ್ತಂಡಗಳ ನಡುವಿನ 26 ಪಂದ್ಯಗಳಲ್ಲಿ ಭಾರತ ಜಯಿಸಿದ್ದು ನಾಲ್ಕರಲ್ಲಿ ಮಾತ್ರ ಎಂಬುದು ಪರಿಸ್ಥಿತಿಯ ಚಿತ್ರಣ ನೀಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಣಿ ಪಡೆ ಸುಧಾರಿತ ಪ್ರದರ್ಶನ ನೀಡುತ್ತಿರುವುದರಿಂದ ನಿರೀಕ್ಷೆ ಇರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next