Advertisement
ಇದಕ್ಕೂ ಮೊದಲು ನಡೆದ ವೆಸ್ಟರ್ನ್ ಆಸ್ಟ್ರೇಲಿಯ ಥಂಡರ್‌ಸ್ಟಿಕ್ಸ್ ತಂಡದೆದುರಿನ ಪಂದ್ಯವನ್ನು ಭಾರತ 2-0 ಗೋಲುಗಳಿಂದ ಜಯಿಸಿತ್ತು.
ಆಸ್ಟ್ರೇಲಿಯ ‘ಎ’ ವಿರುದ್ಧ ಯುವ ಸ್ಟ್ರೈಕರ್ ಸುಮಿತ್ ಕುಮಾರ್ ಜೂನಿಯರ್ ಮತ್ತು 8 ತಿಂಗಳ ಬಳಿಕ ತಂಡವನ್ನು ಕೂಡಿಕೊಂಡ ಡ್ರ್ಯಾಗ್‌ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಗೆಲುವಿನ ರೂವಾರಿಗಳಾದರು. ರೂಪಿಂದರ್ 6ನೇ ನಿಮಿಷದಲ್ಲೇ ಗೋಲಿನ ಖಾತೆ ತೆರದರು. ಸುಮಿತ್ 12ನೇ ಹಾಗೂ 13ನೇ ನಿಮಿಷದಲ್ಲಿ ಬೆನ್ನು ಬೆನ್ನಿಗೆ ಗೋಲು ಬಾರಿಸಿ ಆತಿಥೇಯರನ್ನು ದಂಗುಬಡಿಸಿದರು. ಹೀಗೆ ಮೊದಲ ಕ್ವಾರ್ಟರ್‌ನಲ್ಲೇ ಭಾರತ ಪಾರಮ್ಯ ಮೆರೆಯಿತು. ಅನಂತರದ 3 ಕ್ವಾರ್ಟರ್‌ಗಳಲ್ಲಿ ಗೋಲಿನ ಬರಗಾಲ ಕಾಡತೊಡಗಿತು. ಆಸ್ಟ್ರೇಲಿಯಕ್ಕೆ ದ್ವಿತೀಯ ಕ್ವಾರ್ಟರ್‌ನಲ್ಲೊಮ್ಮೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಕೆಯ ಅವಕಾಶ ಎದುರಾಗಿತ್ತು. ಆದರೆ ಭಾರತದ ಗೋಲ್ ಕೀಪರ್ ಕೃಷ್ಣ ಪಾಠಕ್ ಇದಕ್ಕೆ ತಡೆಯಾಗಿ ನಿಂತರು. ಭಾರತ ತನ್ನ ಮುಂದಿನ ಪಂದ್ಯವನ್ನು ಸೋಮವಾರ ಆಡಲಿದೆ. ಈ ತಂಡದಲ್ಲಿ, ಆಸ್ಟ್ರೇಲಿಯದ ರಾಷ್ಟ್ರೀಯ ತಂಡದ 7 ಆಟಗಾರರಿದ್ದಾರೆ.