Advertisement

ಚಾಂಪಿಯನ್ಸ್‌ ಟ್ರೋಫಿ ಹಾಕಿ: ಸಂಭಾವ್ಯರ ಯಾದಿ ಪ್ರಕಟ

07:20 AM May 26, 2018 | |

ಹೊಸದಿಲ್ಲಿ: ಹಾಲೆಂಡ್‌ನ‌ಲ್ಲಿ ನಡೆಯಲಿರುವ ಪುರುಷರ ಚಾಂಪಿಯನ್ಸ್‌ ಟ್ರೋಫಿ ಹಾಕಿ ಕೂಟಕ್ಕಾಗಿ 48 ಸಂಭಾವ್ಯ ಆಟಗಾರರ ಪಟ್ಟಿಯನ್ನು ಹಾಕಿ ಇಂಡಿಯಾ ಶುಕ್ರವಾರ ಪ್ರಕಟಿಸಿದೆ.

Advertisement

ಸಂಭಾವ್ಯ ಆಟಗಾರರಿಗೆ 21 ದಿನ ರಾಷ್ಟ್ರೀಯ ತರಬೇತಿ ಶಿಬಿರ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ನಡೆಯಲಿದೆ. ಬಳಿಕ ಅಂತಿಮ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸದ್ಯ 6 ಗೋಲ್‌ಕೀಪರ್‌, 14 ಡಿಫೆಂಡರ್ ಸೇರಿದಂತೆ 48 ಸಂಭಾವ್ಯ ಆಟಗಾರರು ಶಿಬಿರದಲ್ಲಿದ್ದಾರೆ. ಹಿರಿಯ ಆಟಗಾರ ರಾಜ್ಯದ ಎಸ್‌.ವಿ. ಸುನೀಲ್‌ ಸ್ಥಾನ ಪಡೆದಿದ್ದು, ಆಯ್ಕೆಯಾಗುವ ಭರವಸೆ ಹೊಂದಿದ್ದಾರೆ. ಉಳಿದಂತೆ ಹರ್ಮನ್‌ಪ್ರೀತ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌, ಸರ್ದಾರ್‌ ಸಿಂಗ್‌ ಸೇರಿದಂತೆ ಬಹಳಷ್ಟು ಅನುಭವಿಗಳು ತಂಡದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next