Advertisement
ಈ ಸಂಖ್ಯೆಯನ್ನಿನ್ನು ಸೀನಿಯರ್ ತಂಡದ ಯಾವುದೇ ಆಟಗಾರನಿಗೆ ನೀಡುವುದಿಲ್ಲ, ಆದರೆ ಜೂನಿಯರ್ ತಂಡದಲ್ಲಿ ಇರುತ್ತದೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ತಿರ್ಕಿ, ಬುಧವಾರ ಏರ್ಪಡಿಸಿದ ಹಾಕಿವೀರನ ವಿದಾಯ ಸಮಾರಂಭದಲ್ಲಿ ಹೇಳಿದರು. ಹಾಗೆಯೇ ಅವರಿನ್ನು ಜೂನಿಯರ್ ಹಾಕಿ ತಂಡದ ಕೋಚ್ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ ಎಂದೂ ಹೇಳಿದರು.
Related Articles
Advertisement
ವ್ಯಕ್ತಿಯನ್ನಾಗಿ ರೂಪಿಸಿದ ಹಾಕಿಈ ಸಂದರ್ಭದಲ್ಲಿ ಮಾತಾಡಿದ ಶ್ರೀಜೇಶ್, “ಇದು 18 ವರ್ಷಗಳ ಸುದೀರ್ಘ ಪಯಣ. ನಾನು ಎಲ್ಲ ಏರಿಳಿತಗಳ ಅನುಭವ ಗಳಿಸಿದೆ. ಹಾಕಿ ನನ್ನನ್ನಿಂದು ಓರ್ವ ವ್ಯಕ್ತಿಯನ್ನಾಗಿ ರೂಪಿಸಿ ಇಲ್ಲಿ ನಿಲ್ಲಿಸಿದೆ. ತಂಡವನ್ನು ಬಿಟ್ಟು ಹೋಗಲು ಬಹಳ ಬೇಸರವಾಗುತ್ತಿದೆ. ತಂಡ ನನ್ನ ಪಾಲಿನ ಎರಡನೇ ಕುಟುಂಬವಿದ್ದಂತೆ’ ಎಂದರು. ನಾಯಕ ಹರ್ಮನ್ಪ್ರೀತ್ ಸಿಂಗ್ ಕೂಡ ಈ ಸಂದರ್ಭ ಶ್ರೀಜೇಶ್ ಸಾಧನೆಯ ಗುಣ ಗಾನ ಮಾಡಿದರು. “ಶ್ರೀಜೇಶ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದರು. ಸದಾ ಹಿರಿಯಣ್ಣನ ರೀತಿಯಲ್ಲಿ ನಿಂತು ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ನಾವೆಲ್ಲ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದರು. “ಇದು ವಿದಾಯ ಸಮಾರಂಭವಲ್ಲ. ಶ್ರೀಜೇಶ್ ಸಾಧನೆಯ ಸಂಭ್ರಮಾಚರಣೆ’ ಎಂದು ದಿಲೀಪ್ ಟಿರ್ಕಿ ಹೇಳಿದರು. ಮೊದಲು ದ್ವೇಷ, ಬಳಿಕ ಪ್ರೀತಿ
ಶ್ರೀಜೇಶ್ ಮತ್ತು ಅನೀಶ್ಯಾ ಅವರದು ಪ್ರೇಮ ವಿವಾಹ. ಪ್ರೀತಿಸುವುದಕ್ಕಿಂತ ಮೊದಲು ಶ್ರೀಜೇಶ್ ಆಕೆಯನ್ನು ದ್ವೇಷಿಸು ತ್ತಿದ್ದರಂತೆ. ಅನೀಶ್ಯಾ ತನಗಿಂತ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದುದೇ ಇದಕ್ಕೆ ಕಾರಣ! “ನಾನಾಗ ಕಣ್ಣೂರು ಕ್ರೀಡಾಶಾಲೆಯಲ್ಲಿ ಓದುತ್ತಿದ್ದೆ. ಬಹಳ ಪ್ರತಿಭಾವಂತನಾಗಿದ್ದೆ, ತರಗತಿಯಲ್ಲಿ ಯಾವತ್ತೂ ಮೊದಲಿಗ. ಅಧ್ಯಾಪಕರ ನೆಚ್ಚಿನ ವಿದ್ಯಾರ್ಥಿ. ಆದರೆ ಇಲ್ಲಿಗೆ ಬಂದ ಅವಳು ನನಗಿಂತ ಹೆಚ್ಚಿನ ಅಂಕ ಗಳಿಸತೊಡಗಿದಳು. ನನ್ನದು 50ರಲ್ಲಿ 35-42ರ ರೇಂಜ್ ಅಂಕ ಗಳಿಕೆಯಾದರೆ, ಆಕೆಯದು 50ಕ್ಕೆ 49. ಸಹಜವಾಗಿಯೇ ನಾನವಳನ್ನು ದ್ವೇಷಿಸತೊಡಗಿದೆ. ಅನಂತರವೇ ಪ್ರೇಮಾಂಕುರವಾದುದು’ ಎಂದು ಶ್ರೀಜೇಶ್ ಬಹಳ ತಮಾಷೆಯಾಗಿ ಹೇಳಿದರು. ಅನೀಶ್ಯಾ ಲಾಂಗ್ಜಂಪ್ನಲ್ಲಿ ಗಮನ ಸೆಳೆದಿದ್ದರು.
“ಶ್ರೀಜೇಶ್ ಅವರಿನ್ನು ದೇಶದ ಜೂನಿಯರ್ ಹಾಕಿಯತ್ತ ಮುಖ ಮಾಡಲಿದ್ದಾರೆ. ಹೀಗಾಗಿ ಅವರ ನಂ. 16 ಜೆರ್ಸಿಗೆ ವಿದಾಯ ಹೇಳಲಾಗುವುದು. ಆದರೆ ಜೂನಿಯರ್ ತಂಡದಲ್ಲಿ ಈ ಸಂಖ್ಯೆ ಕಾಣಿಸಿಕೊಳ್ಳಲಿದೆ. ಅವರು ಜೂನಿಯರ್ ತಂಡದ ಮೂಲಕ ಮತ್ತೋರ್ವ ಶ್ರೀಜೇಶ್ನನ್ನು ಹುಟ್ಟುಹಾಕಿ ಭಾರತಕ್ಕೆ ಕೊಡುಗೆಯಾಗಿ ನೀಡಲಿ’ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಹೇಳಿದರು. ಸಮಾರಂಭದಲ್ಲಿ ಹಾಕಿ ಆಟಗಾರರೆಲ್ಲ “ಶ್ರೀಜೇಶ್ 16′ ಎಂದು ಬರೆಯಲ್ಪಟ್ಟಿದ್ದ ಕೆಂಪು ಟೀ ಶರ್ಟ್ ಧರಿಸಿ ಗೌರವ ಸಲ್ಲಿಸಿದರು. “ಇದು 18 ವರ್ಷಗಳ ಸುದೀರ್ಘ ಪಯಣ. ನಾನು ಎಲ್ಲ ಏರಿಳಿತಗಳ ಅನುಭವ ಗಳಿಸಿದೆ. ಹಾಕಿ ನನ್ನನ್ನಿಂದು ಓರ್ವ ವ್ಯಕ್ತಿಯನ್ನಾಗಿ ರೂಪಿಸಿ ಇಲ್ಲಿ ನಿಲ್ಲಿಸಿದೆ. ತಂಡವನ್ನು ಬಿಟ್ಟು ಹೋಗಲು ಬಹಳ ಬೇಸರವಾಗುತ್ತಿದೆ. ತಂಡ ನನ್ನ ಪಾಲಿನ ಎರಡನೇ ಕುಟುಂಬವಿದ್ದಂತೆ” - ಶ್ರೀಜೇಶ್