Advertisement

ಹಾಕಿ ಇಂಡಿಯಾ ಲೀಗ್‌: ಇಂದು ಸೆಮಿಫೈನಲ್‌ ಕಾದಾಟ

09:55 AM Feb 25, 2017 | Team Udayavani |

ಹೊಸದಿಲ್ಲಿ: ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಹಾಕಿ ಇಂಡಿಯಾ ಲೀಗ್‌(ಎಚ್‌ಐಎಲ್‌) ಅಂತಿಮ ಹಂತಕ್ಕೆ ತಲುಪಿದೆ. ಶನಿವಾರ ಮೊದಲ ಸೆಮಿಫೈನಲ್‌ನಲ್ಲಿ ಉತ್ತಮ ಪ್ರದೇಶ ವಿಜಾರ್ಡ್ಸ್‌ ತಂಡ ಕಲಿಂಗ ಲ್ಯಾನ್ಸರ್ ತಂಡವನ್ನು ಎದುರಿಸಲಿದೆ. ಮತ್ತೂಂದು ಸೆಮಿಫೈನಲ್‌ ಪಂದ್ಯದಲ್ಲಿ ದಬಾಂಗ್‌ ಮುಂಬೈ ತಂಡ ದಿಲ್ಲಿ ವೇವ್‌ರೈಡರ್ ತಂಡವನ್ನು ಎದುರಿಸಲಿದೆ. 

Advertisement

ರವಿವಾರ ಫೈನಲ್‌ ಪಂದ್ಯ ನಡೆಯಲಿದ್ದು, ಎಲ್ಲ ಪಂದ್ಯಗಳು ಚಂಡೀಗಢದಲ್ಲಿ ನಡೆಯಲಿವೆ. ಲೀಗ್‌ನ ಅಂತಿಮ ಪಂದ್ಯದಲ್ಲಿ ಉತ್ತರ ಪ್ರದೇಶ 4-4ರಿಂದ ದಬಾಂಗ್‌ ಮುಂಬೈ ವಿರುದ್ಧ ಡ್ರಾ ಸಾಧಿಸಿತ್ತು. ಈ ಮೂಲಕ 25 ಅಂಕ ಸಂಪಾದಿಸಿ ಅಂಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಹಾಗೇ 35 ಅಂಕ ಪಡೆದ ದಬಾಂಗ್‌ ಮುಂಬೈ, 28 ಅಂಕ ಪಡೆದ ಕಳಿಂಗ ಲ್ಯಾನ್ಸರ್, 23 ಅಂಕ ಪಡೆದ ದಿಲ್ಲಿ ವೇವ್‌ರೈಡರ್ ತಂಡಗಳು ಸೆಮಿಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿವೆ. ಉಳಿದಂತೆ ಪಂಜಾಬ್‌ ವಾರಿಯರ್ ಮತ್ತು ರಾಂಚಿ ತಂಡಗಳು ಹೊರಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next