Advertisement
ಮನ್‌ದೀಪ್ ಸಿಂಗ್ ಅವರ ಗೋಲಿನ ನೆರವಿನಿಂದ 28ನೇ ನಿಮಿಷ ದಲ್ಲಿ ಮುನ್ನಡೆ ಪಡೆದ ಭಾರತ ಸತತ 2ನೇ ಗೆಲುವಿನ ನಿರೀಕ್ಷೆ ಹುಟ್ಟಿಸಿತ್ತು. ಆದರೆ ರಕ್ಷಣಾ ಪಡೆ ಮಾಡಿದ ಸಣ್ಣ ತಪ್ಪು ಕೊನೆಯ 22 ಸೆಕೆಂಡ್‌ಗಳ ಆಟದ ವೇಳೆ ಕೊರಿಯಾಗೆ ಪೆನಾಲ್ಟಿ ಕಾರ್ನರ್ ಲಭಿಸಿತು. ಜಂಗ್‌ಹ್ಯುನ್ ಜಾಂಗ್ ಗೋಲು ಬಾರಿಸಿ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಯಶಸ್ವಿಯಾದರು.
ಗೋಲಿನ ಹುಡುಕಾಟದಲ್ಲಿದ್ದ ಭಾರತಕ್ಕೆ 10ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಕೈತಪ್ಪಿತು. ಇನ್ನೊಂದು ಪೆನಾಲ್ಟಿ ಅವಕಾಶ ಪಡೆದುಕೊಂಡ ಭಾರತದ ಆಟಕ್ಕೆ ಕೊರಿಯಾದ ಗೋಲ್‌ಕೀಪರ್ ಬ್ರೇಕ್ ಹಾಕಿದರು. ಆರಂಭದಿಂದಲೂ ಎರಡು ತಂಡಗಳೂ ತಂತ್ರಗಾರಿಕೆಯ ಆಟ ವಾಡಿದರೂ ಕೊರಿಯಾದ 3 ಆಟಗಾರರು ಗ್ರೀನ್ ಕಾರ್ಡ್ ಪಡೆದ ಕಾರಣ ತಂಡ 8 ಆಟಗಾರರೊಂದಿಗೆ ಹೋರಾಟ ನಡೆಸಬೇಕಾಯಿತು. ಇದರಿಂದ ಭಾರತ ಸುಲಭವಾಗಿ ಕೊರಿಯಾದ ವೃತ್ತದೊಳಗೆ ನುಗ್ಗಿತು. ಅನುಭವಿ ಆಟಗಾರ ಮನ್‌ದೀಪ್ ಗೋಲಿನ ಖಾತೆ ತೆರೆದರು (28ನೇ ನಿಮಿಷ). ಬಳಿಕ ಭಾರತ ರಕ್ಷಣಾತ್ಮಕ ಆಟವಾಡಿ ಮುನ್ನಡೆ ಕಾಯ್ದುಕೊಳ್ಳತೊಡಗಿತು.
Related Articles
3ನೇ ಕ್ವಾರ್ಟರ್ ಆರಂಭದಲ್ಲೇ ಮಳೆ ಸುರಿಯಲಾರಂಭಿಸಿತು. ಮಳೆಯಲ್ಲೇ ಆಟ ಮುಂದುರಿಸಿದಾಗ ಭಾರತದ ರಕ್ಷಣಾ ಪಡೆಯ ತಪ್ಪಿನಿಂದ ಕೊರಿಯಾಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿತು. ಆದರೆ ಅಮಿತ್ ರೋಹಿದಾತ್ ಉತ್ತಮ ಆಟವಾಡಿ ಕೊರಿಯಾ ಆಟಗಾರರನ್ನು ತಡೆದರು.
Advertisement
ಪಂದ್ಯ ಕೊನೆಯಾಗಲು ಇನ್ನೇನು 8 ನಿಮಿಷಗಳಿರುವಾಗ ಮಳೆಯ ಆಟ ಜೋರಾದ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು. ಮಳೆ ನಿಂತ ಬಳಿಕ ಆರಂಭದ ಆಟದಲ್ಲಿ ಕೊರಿಯಾ ಆಕ್ರಮಣ ಆಟಕ್ಕಿಳಿದು ಒಂದರ ಹಿಂದೆ ಒಂದರಂತೆ ಪೆನಾಲ್ಟಿ ಅವಕಾಶ ಸೃಷ್ಟಿಸಿಕೊಂಡಿತು. ಆದರೆ ಇದಕ್ಕೆ ಭಾರತೀಯರು ತಡೆಯಾಗಿ ನಿಂತರು.ಆಟದ ಮುಕ್ತಾಯಕ್ಕೆ 53 ಸೆಕೆಂಡ್ ಉಳಿದಿರುವಾಗ ಕೊರಿಯಾ ಪೆನಾಲ್ಟಿ ಪಡೆದರೂ ಗೋಲ್‌ಕೀಪರ್ ಶ್ರೀಜೇಶ್ ಅದ್ಭುತವಾಗಿ ತಡೆದರು. ಕೊರಿಯಾ ಮಾಡಿದ ರೆಫೆರಲ್ ಯಶಸ್ವಿಯಾದ ಕಾರಣ ತಂಡಕ್ಕೆ ಮತ್ತೂಂದು ಪೆನಾಲ್ಟಿ ದೊರಕಿತು. ಈ ಅವಕಾಶವನ್ನು ಕೈಚೆಲ್ಲಲು ಬಿಡದ ಜಂಗ್‌ಹ್ಯುನ್ ಜಾಂಗ್ ಗೋಲು ಬಾರಿಸಿ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿದರು. ಮಾ. 26ರಂದು ನಡೆಯುವ 3ನೇ ಪಂದ್ಯದಲ್ಲಿ ಭಾರತ ಆತಿಥೇಯ ಮಲೇಶ್ಯವನ್ನು ಎದುರಿಸಲಿದೆ. ಕೆನಡಾ, ಮಲೇಶ್ಯ ತಂಡಗಳಿಗೆ ಗೆಲುವು
ದಿನದ ಉಳಿದ ಪಂದ್ಯಗಳಲ್ಲಿ ಕೆನಡಾ ಹಾಗೂ ಆತಿಥೇಯ ಮಲೇಶ್ಯ ತಂಡಗಳು ಜಯ ಸಾಧಿಸಿವೆ. ದಿನದ ದ್ವಿತೀಯ ಪಂದ್ಯದಲ್ಲಿ ಪೋಲೆಂಡ್ ಮೇಲೆ ಸವಾರಿ ಮಾಡಿದ ಕೆನಡಾ 4-0 ಅಂತರದ ಭರ್ಜರಿ ಗೆಲುವು ಒಲಿಸಿಕೊಂಡಿತು. 3ನೇ ಪಂದ್ಯದಲ್ಲಿ ಮಲೇಶ್ಯ ಭಾರೀ ಹೋರಾಟದ ಬಳಿಕ ಏಶ್ಯಾಡ್ ಚಾಂಪಿಯನ್ ಜಪಾನ್ ತಂಡವನ್ನು 4-3 ಗೋಲುಗಳ ಅಂತರದಿಂದ ಕೆಡವಿತು. ಇದು ಜಪಾನ್‌ಗೆ ಎದುರಾದ ಸತತ ಎರಡನೇ ಸೋಲು. ಶನಿವಾರದ ಪಂದ್ಯದಲ್ಲಿ ಅದು ಭಾರತಕ್ಕೆ ಶರಣಾಗಿತ್ತು.