ಹೊಸದಿಲ್ಲಿ: ರವಿವಾರ 200ನೇ ಅಂತಾರಾಷ್ಟ್ರೀಯ ಪಂದ್ಯ ವಾಡಿದ ಕೊಥಾಜಿತ್ ಸಿಂಗ್ ಅವರನ್ನು “ಹಾಕಿ ಇಂಡಿಯಾ’ ಅಭಿನಂದಿಸಿದೆ. ನ್ಯೂಜಿಲ್ಯಾಂಡ್ ಎದುರಿನ ಒಲಿಂಪಿಕ್ ಟೆಸ್ಟ್ ಹಾಕಿ ಪಂದ್ಯದಲ್ಲಿ ಕೊಥಜಿತ್ ಈ ಮೈಲುಗಲ್ಲು ನೆಟ್ಟರು.
ಶನಿವಾರವಷ್ಟೇ 27ನೇ ವರ್ಷಕ್ಕೆ ಕಾಲಿಟ್ಟ ಮಣಿಪುರ ಮೂಲದ ಡಿಫೆಂಡರ್ ಆಗಿರುವ ಕೊಥಾಜಿತ್ ಸಿಂಗ್ 2012ರಲ್ಲಿ ಭಾರತವನ್ನು ಮೊದಲ ಸಲ ಪ್ರತಿನಿಧಿಸಿದ್ದರು. ಅಂದಿನಿಂದ ತಂಡದ ಖಾಯಂ ಸದಸ್ಯನಾಗಿ ಆಡುತ್ತ ಬಂದಿದ್ದಾರೆ.
2014ರ ಕಾಮನ್ವೆಲ್ತ್ ಗೇಮ್ಸ್ ಹಾಗೂ ಅದೇ ವರ್ಷದ ಏಶ್ಯನ್ ಗೇಮ್ಸ್‌ನಲ್ಲಿ ಬಂಗಾರ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.
ಪಾಕಿಸ್ಥಾನ ವಿರುದ್ಧದ ಏಶ್ಯಾಡ್ ಫೈನಲ್‌ನಲ್ಲಿ ಸಮಬಲದ ಗೋಲು ದಾಖಲಿಸುವ ಮೂಲಕ ಪಂದ್ಯವನ್ನು ಶೂಟೌಟ್‌ಗೆ ಕೊಂಡೊಯ್ದದ್ದು ಕೊಥಜಿತ್ ಪಾಲಿನ ಸ್ಮರಣೀಯ ಸಾಧನೆಯಾಗಿದೆ. 2016ರ ರಿಯೋ ಒಲಿಂಪಿಕ್ಸ್ ಹಾಕಿ ತಂಡದಲ್ಲೂ ಕೊಥಜಿತ್ ಆಡಿದ್ದರು.