Advertisement

ವನಿತಾ ಹಾಕಿ: ಭಾರತಕ್ಕೆ ಬ್ರಿಟನ್‌ ವಿರುದ್ಧ 1-3 ಸೋಲು

11:24 PM Oct 03, 2019 | Sriram |

ಮಾರ್ಲೊ (ಗ್ರೇಟ್‌ ಬ್ರಿಟನ್‌): ಭಾರತದ ವನಿತಾ ಹಾಕಿ ತಂಡ ಬುಧವಾರ ನಡೆದ 4ನೇ ಪಂದ್ಯದಲ್ಲಿ ಆತಿಥೇಯ ಗ್ರೇಟ್‌ ಬ್ರಿಟನ್‌ ವಿರುದ್ಧ 1-3 ಅಂತರ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿ 1-1 ಸಮಬಲಕ್ಕೆ ಬಂದಿದೆ.

Advertisement

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಪ್ರದರ್ಶನ ತೋರಿದ ಉಭಯ ತಂಡಗಳು ಮೊದಲನೇ ಗೋಲನ್ನು ಬಹುಬೇಗ ಗಳಿಸಿದವು. ಬ್ರಿಟನ್‌ ಪರ ಹನ್ನಾ ಮಾರ್ಟಿನ್‌ 5ನೇ ನಿಮಿಷದಲ್ಲಿ ಖಾತೆ ತೆರೆದರು. 18ನೇ ನಿಮಿಷಗಳಲ್ಲಿ ನೇಹಾ ಗೋಯಲ್‌ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

ದ್ವಿತೀಯ ಕ್ವಾರ್ಟರ್‌ಗೂ ಸ್ವಲ್ಪ ಮುನ್ನ, 29ನೇ ನಿಮಿಷದಲ್ಲಿ ಚಾರ್ಲೋಟ್‌ ವಾಟ್ಸನ್‌ 2ನೇ ಗೋಲು ಬಾರಿಸಿ ಬ್ರಿಟನ್‌ಗೆಮುನ್ನಡೆ ಒದಗಿಸಿದರು. 3ನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತು. ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಕೊನೆಯ ಕ್ವಾರ್ಟರ್‌ನಲ್ಲಿ ಗಿಸೆಲ್‌ ಆ್ಯನ್‌ಸ್ಲೆ ಪೆನಾಲ್ಟಿ ಕಾರ್ನರ್‌ ಒಂದನ್ನು ಗೋಲಾಗಿ ಪರಿವರ್ತಿಸುವ ಮೂಲಕ ಬ್ರಿಟನ್‌ ಮುನ್ನಡೆಯನ್ನು ವಿಸ್ತರಿಸುವಲ್ಲಿ ಯಶಸ್ವಿಯಾದರು.
ಅಂತಿಮ ಪಂದ್ಯ ಶುಕ್ರವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next