Advertisement

ಗೋಲ್‌ಕೀಪರ್‌ ಆಕಾಶ್‌ ಚಿಕ್ತೆಗೆ 2 ವರ್ಷ ನಿಷೇಧ

08:44 AM Oct 20, 2018 | |

ಹೊಸದಿಲ್ಲಿ: ನಿಷೇಧಿತ ದ್ರವ್ಯ ಸೇವಿಸಿದ ಕಾರಣಕ್ಕಾಗಿ ಹಾಕಿ ಗೋಲ್‌ಕೀಪರ್‌ ಆಕಾಶ್‌ ಚಿಕ್ತೆ ಅವರಿಗೆ ರಾಷ್ಟ್ರೀಯ ದ್ರವ್ಯ ವಿರೋಧಿ ದಳ (ನಾಡಾ) ಎರಡು ವರ್ಷ ನಿಷೇಧ ಹೇರಿದೆ. ಚಿಕ್ತೆ ಅವರನ್ನು ಕಳೆದ ಮಾರ್ಚ್‌ ನಿಂದ ನಾಡಾ ಅಮಾನತು ಮಾಡಿದೆ ಮತ್ತು ಅಕ್ಟೋಬರ್‌ 8ರಂದು ದ್ರವ್ಯ ವಿರೋಧಿ ಶಿಸ್ತು ಸಮಿತಿ ಅಂತಿಮ ವಿಚಾರಣೆ ನಡೆಸಿದ ಬಳಿಕ ಎರಡು ವರ್ಷಗಳ ನಿಷೇಧ ಹೇರಿದೆ. ಫೆ. 27ರಂದು ಬೆಂಗಳೂರಿನಲ್ಲಿ ನಡೆದ ಸೀನಿಯರ ಹಾಕಿ ತಂಡದ ಶಿಬಿರದ ವೇಳೆ ನಡೆದ ಪರೀಕ್ಷೆ ವೇಳೆ ಚಿಕ್ತೆ ಅವರು ನಿಷೇಧಿತ ಸ್ಟೀರಾಯ್ಡ  (ನೊರಾಂಡ್ರೊಸ್ಟೆರೋನ್‌) ಸೇವಿಸಿ ರುವುದು ಪತ್ತೆಯಾಗಿತ್ತು. ಚಿಕ್ತೆ ಅವರಲ್ಲದೇ ಇತರ ಕ್ರೀಡೆಗಳ ಐವರು ಆಟಗಾರರಿಗೆ ದ್ರವ್ಯ ಉಲ್ಲಂ ಸಿದ ಕಾರಣಕ್ಕಾಗಿ ನಾಲ್ಕು ವರ್ಷಗಳ ಅಮಾನತು ವಿಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next