Advertisement
ಪಂದ್ಯಾವಳಿ ಶುಕ್ರವಾರದಿಂದ ನ. 5ರ ತನಕ ರಾಂಚಿಯಲ್ಲಿ ಸಾಗಲಿದೆ. ಭಾರತ ಮೊದಲ ಬಾರಿಗೆ ಈ ಪಂದ್ಯಾವಳಿಯ ಆತಿಥ್ಯ ವಹಿಸುತ್ತಿರುವುದು ವಿಶೇಷ. ಆತಿಥೇಯ ಭಾರತದೊಂದಿಗೆ ಏಷ್ಯಾ ಡ್‌ನಲ್ಲಿ ಪಾಲ್ಗೊಂಡ ಚೀನ, ಜಪಾನ್, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ಥಾಯ್ಲೆಂಡ್ ತಂಡಗಳು ಇಲ್ಲಿ ಸ್ಪರ್ಧಿಸಲಿವೆ. ಇದು ರೌಂಡ್ ರಾಬಿನ್ ಲೀಗ್ ಮಾದರಿಯ ಪಂದ್ಯಾವಳಿ ಆಗಿದ್ದು, ಅಗ್ರ 4 ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿವೆ.ಶುಕ್ರವಾರ ಸವಿತಾ ಪೂನಿಯಾ ತಂಡ ಥಾಯ್ಲೆಂಡ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಉಳಿದೆರಡು ಪಂದ್ಯಗಳಲ್ಲಿ ಜಪಾನ್-ಮಲೇಷ್ಯಾ, ಚೀನ-ದಕ್ಷಿಣ ಕೊರಿಯಾ ಎದುರಾಗಲಿವೆ.
ಏಷ್ಯಾಡ್‌ನಲ್ಲಿ ಆಡಿದ್ದ ಅನುಭವಿ ಮಿಡ್‌ಫಿàಲ್ಡರ್ ಸುಶೀಲಾ ಚಾನು ಗಾಯಾಳದ ಕಾರಣ ಈ ಕೂಟದಿಂದ ಹಿಂದೆ ಸರಿದಿದ್ದಾರೆ. ಇವರ ಸ್ಥಾನಕ್ಕೆ ಬಲ್ಜೀತ್ ಕೌರ್ ಬಂದಿದ್ದಾರೆ.
Related Articles
Advertisement
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಚೀನ, ಹಾಲಿ ಚಾಂಪಿಯನ್ ಜಪಾನ್ ಈ ಕೂಟದ ಬಲಿಷ್ಠ ತಂಡಗಳಾಗಿವೆ. ಥಾಯ್ಲೆಂಡ್ ಬಳಿಕ ಭಾರತ ತಂಡ ಮಲೇಷ್ಯಾ (ಅ. 28), ಚೀನ (ಅ. 30), ಜಪಾನ್ (ಅ. 31) ಮತ್ತು ಕೊರಿಯಾ (ನ. 2) ವಿರುದ್ಧ ಆಡಲಿದೆ. ಭಾರತ 2016ರಲ್ಲಿ ಏಷ್ಯನ್ ಚಾಂಪಿಯನ್ ಆಗಿತ್ತು. 2013 ಮತ್ತು 2018 ರಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು. 2010ರಲ್ಲಿ 3ನೇ ಸ್ಥಾನಕ್ಕೆ ಇಳಿದಿತ್ತು.