Advertisement
ರವಿವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ ಆತಿಥೇಯ ಭಾರತ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿ ಎರಡನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪ್ರಶಸ್ತಿ ಜಯಿಸಿತ್ತು.“ನಮ್ಮದು ಆತಿಥೇಯ ತಂಡವಾಗಿತ್ತು. ಭಾರತದಲ್ಲಿ ಮೊದಲ ಸಲ ಆಯೋಜನೆಗೊಂಡ ಪಂದ್ಯಾವಳಿಯೂ ಇದಾಗಿತ್ತು. ಹೀಗಾಗಿ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು. ಏಷ್ಯಾಡ್ ಸೆಮಿಫೈನಲ್‌ನಲ್ಲಿ ಎಡವಿದ ಬಳಿಕ ನಮ್ಮ ಮುಂದೆ ಉತ್ತಮ ಅವಕಾಶವೊಂದು ತೆರೆಯಲ್ಪಟ್ಟಿತು. ಅಜೇಯವಾಗಿ ಸಾಗಿ ಚಾಂಪಿಯನ್ ಆಗುವ ಯೋಜನೆಯನ್ನು ರೂಪಿಸಿದೆವು. ಇದು ಯಶಸ್ವಿಯಾದುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ’ ಎಂಬುದಾಗಿ ಸವಿತಾ ಹೇಳಿದರು.
ಫ್ಲಡ್‌ಲೈಟ್ ಸಮಸ್ಯೆಯಿಂದಾಗಿ ಈ ಪಂದ್ಯ 50 ನಿಮಿಷ ತಡವಾಗಿ ಆರಂಭಗೊಂಡಿತ್ತು. ಭಾರತ ಆರಂಭ ದಿಂದಲೇ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡುತ್ತ ಹೋಯಿತು. ಸಂಗೀತಾ ಕುಮಾರಿ (17ನೇ ನಿಮಿಷ), ನೇಹಾ (46ನೇ ನಿಮಿಷ), ಲಾರೆಮಿÕಯಾಮಿ (57ನೇ ನಿಮಿಷ) ಮತ್ತು ವಂದನಾ ಕಟಾರಿಯಾ (60ನೇ ನಿಮಿಷ) ಭಾರತದ ಗೋಲುವೀರರೆನಿಸಿದರು. ಕಳೆದ ಸಲದ ಚಾಂಪಿಯನ್ ಜಪಾನ್‌ಗೆ ಒಂದೂ ಗೋಲು ಸಿಡಿಸಲಾಗಲಿಲ್ಲ. ಭಾರತ 2016ರ ಸಿಂಗಾಪುರ ಕೂಟದಲ್ಲಿ ಮೊದಲ ಸಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿತ್ತು. ಜಪಾನ್ 2013 ಮತ್ತು 2021ರಲ್ಲಿ ಚಾಂಪಿಯನ್ ಆಗಿತ್ತು.