Advertisement

Hockey; ಅ. 13-15: ಎಚ್‌ಐಎಲ್‌ ಆಟಗಾರರ ಹರಾಜು

01:01 AM Oct 11, 2024 | Team Udayavani |

ಹೊಸದಿಲ್ಲಿ: ಬಹುನಿರೀಕ್ಷಿತ ಹಾಕಿ ಇಂಡಿಯಾ ಲೀಗ್‌ನ ಆಟಗಾರರ ಹರಾಜು ಅ. 13ರಿಂದ 15ರ ವರೆಗೆ ನಡೆಯಲಿದೆ. ಈ ಹರಾಜಿನಲ್ಲಿ ಸಾವಿರಕ್ಕೂ ಹೆಚ್ಚಿನ ರಾಷ್ಟ್ರೀಯ ಮತ್ತು ವಿದೇಶಿ ಆಟಗಾರರು ಆಯ್ಕೆಗಾಗಿ ಪೈಪೋಟಿ ನಡೆಸಲಿದ್ದಾರೆ.

Advertisement

ಹಾಕಿ ಲೀಗ್‌ ಏಳು ವರ್ಷಗಳ ವಿರಾಮದ ಬಳಿಕ ವಿಸ್ತೃತ ಸ್ವರೂಪದೊಂದಿಗೆ ಮರಳುತ್ತಿದೆ. ಏಕಕಾಲದಲ್ಲಿ ಪುರುಷರ ಮತ್ತು ವನಿತೆಯರ ಲೀಗ್‌ ಸ್ಪರ್ಧೆಗಳು ನಡೆಯಲಿವೆ.

ಪುರುಷರ ಸ್ಪರ್ಧೆಯಲ್ಲಿ ಎಂಟು ತಂಡಗಳು ಹೋರಾಡಲಿವೆ. ಇದಕ್ಕಾಗಿ ಆಟಗಾರರ ಹರಾಜು ಪ್ರಕ್ರಿಯೆ ಅ. 13 ಮತ್ತು 14ರಂದು ನಡೆಯಲಿದೆ. ವನಿತೆಯರ ಹರಾಜು ಪ್ರಕ್ರಿಯೆ ಅ. 15ರಂದು ಜರಗಲಿದೆ. ಎಂದು ಹಾಕಿ ಇಂಡಿಯಾಯ ಪ್ರಕಟನೆ ತಿಳಿಸಿದೆ.

“ಈ ಹರಾಜು ವಿಶ್ವದ ಅತ್ಯಂತ ರೋಮಾಂಚಕಾರಿ ಹಾಕಿ ಸ್ಪರ್ಧೆಗಳ ಪುನರುಜ್ಜೀವನವನ್ನು ಸೂಚಿಸುತ್ತದೆ. ಮಾತ್ರವ ಲ್ಲದೇ ಭಾರತದಲ್ಲಿ ಮಹಿಳಾ ಹಾಕಿಯನ್ನು ಉತ್ತೇಜಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ” ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next