Advertisement

ಹವ್ಯಾಸಗಳು ಜೀವನ ಶೈಲಿಯ ಬಳುವಳಿ: ರೇಖಾ ಹೆಗ್ಡೆ

11:14 PM Jun 08, 2019 | sudhir |

ಕಾರ್ಕಳ: ಜೇಸಿಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ. 8ರಂದು ಚಿತ್ರಕಲಾ ತರಗತಿ ಉದ್ಘಾಟನೆಗೊಂಡಿತು. ನ್ಯಾಯವಾದಿ ರೇಖಾ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ, ನಾವು ಬೆಳೆಯುತ್ತಲೇ ಹಲವು ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತೇವೆ. ಜೇಸಿಸ್‌ ವಿದ್ಯಾ ಸಂಸ್ಥೆಯು ಇಂತಹ ಹವ್ಯಾಸಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಉತ್ತಮ ವಿಚಾರ. ಹವ್ಯಾಸಗಳು ಬದುಕಿನ ಒಂದು ಭಾಗ. ಅದಕ್ಕಾಗಿ ಸಮಯ ನಿಗದಿಗೊಳಿಸುವುದು ಅತಿ ಅಗತ್ಯವೆಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಚಿತ್ತರಂಜನ್‌ ಶೆಟ್ಟಿ, ಮನಸ್ಸಿನ ಭಾವನೆಗಳನ್ನು ಕೇಂದ್ರೀಕರಿಸಿಕೊಂಡು ರೇಖೆಗಳ ಮೂಲಕ ಚಿತ್ರದ ರೂಪ ಕೊಡುವುದು ವಿಶೇಷವಾದ ಸೃಜನಶೀಲತೆ. ಅಂತಹ ಸೃಜನಶೀಲರು ಒಳ್ಳೆಯ ಚಿತ್ರಗಾರರಾಗುತ್ತಾರೆ ಎಂದರು.

ಶಾಲಾ ಆಡಳಿತಾಧಿಕಾರಿ ಪೂನಂ ಕಾಮತ್‌, ಚಿತ್ರಕಲಾ ತರಬೇತುದಾರ ಸುಜೇಂದ್ರ ಕಾರ್ಲ, ಮಾರ್ಗದರ್ಶಿ ಶಿಕ್ಷಕಿಯರಾದ ರೀಟಾ ಪಿರೇರ, ಸುಷ್ಮಾ ಮಲ್ಯ ಉಪಸ್ಥಿತರಿದ್ದರು. ಪ್ರೀತಿ ಬಿ.ಕೆ. ಸ್ವಾಗತಿಸಿ, ಮಾಧವಿ ನಿರೂಪಿಸಿದರು. ವಿಮಲಾ ಶೆಣೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next