Advertisement

ಅಮಾನಿಕೆರೆಗೆ ಎಚ್‌.ಎನ್‌.ವ್ಯಾಲಿ ನೀರು

08:03 AM May 25, 2020 | Lakshmi GovindaRaj |

ಶಿಡ್ಲಘಟ್ಟ: ಸತತ ಬರಗಾಲದಿಂದ ತತ್ತರಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಬ್ಬಾಳ-ನಾಗವಾರ ಕೆರೆಯ ಶುದ್ಧೀ ಕರಿಸಿದ ನೀರು ಹರಿಯುತ್ತಿದ್ದು, ಶೀಘ್ರದಲ್ಲಿ ಶಿಡ್ಲಘಟ್ಟ ನಗರದ ಅಮಾನಿಕೆರೆಗೆ ಹೆಚ್‌.ಎನ್‌.ವ್ಯಾಲಿ ನೀರು ಹರಿ ಯಲಿದೆ  ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು. ನಗರದ ಕದಿರಿಪಾಳ್ಯದಲ್ಲಿ ನೀರು ಶುದ್ಧೀಕರಣ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾ ವರಿ ಯೋಜನೆ ಜಾರಿಗೊಳಿಸಲು  ಹೋರಾಟ ನಡೆಸಿದ ಫಲದಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್‌.ಎನ್‌.ವ್ಯಾಲಿ ನೀರು ಹರಿಸಲು ಯೋಜನೆ ರೂಪಿಸಿದ್ದರಿಂದ ಅವಳಿ  ಜಿಲ್ಲೆಗಳಿಗೆ ಶುದ್ಧೀಕರಿಸಿದ ನೀರು ಕೆರೆಗಳಿಗೆ ಹರಿಯಲಿದೆ.

ಇದರಿಂದ ಅಂತರ್ಜಲ ಮಟ್ಟ ವೃದಿಯಾಗಿ ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆ ಗಳಲ್ಲಿ  ಹೂಳೆತ್ತುವ ಜಲಸಂವರ್ಧನೆ ಯೋಜನೆ ಯನ್ನು ತಮ್ಮ ಕಾಲಾವಧಿಯಲ್ಲಿ ಜಾರಿಗೊಳಿಸಲಾಗಿತ್ತು. ನಂತರ ಬಂದ ಸರ್ಕಾರ ಈ ಯೋಜನೆಯನ್ನು ಮುಂದುವರಿ ಸಿಲ್ಲ. ಇದೀಗ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ  ಯೋಜನೆ ಮೂಲಕ ಅಂರ್ತಜಲ ಮಟ್ಟ ವೃದಿಗೊಳಿಸುವ ಕಾಮಗಾರಿಗಳನ್ನು ಸರ್ಕಾರ ಕೈಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ನಾರಾಯಣ ಸ್ವಾಮಿ, ರಿಯಾಝ್ಪಾಷ, ವಕೀಲ ಮುನಿರಾಜು, ಭಾಜಪ ಮುಖಂಡ  ಬಿ.ಕೆಂಪರೆಡ್ಡಿ, ನಗರಸಭೆ ಪೌರಾ ಯುಕ್ತ ತ್ಯಾಗರಾಜ್‌, ಆರೋಗ್ಯ ನಿರೀಕ್ಷಕಿ ಶೋಭಾ, ನಗರಸಭೆ ನೀರು ಸರಬರಾಜು ವಿಭಾಗದ ಮುರಳಿ, ಜೆಇ ರಮೇಶ್‌, ಪ್ರಸಾದ್‌,ಸುಧಾಕರ್‌, ಶ್ರೀನಿವಾಸ್‌, ರೆಡ್ಡಿ, ಮನೋಹರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next