Advertisement
ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ 479 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದರು. ಭೀಮಾಶಂಕರ ಬಿಲಗುಂದಿ ಅವರು ಅತ್ಯಧಿಕ 145 ಮತಗಳ ಅಂತರದಿಂದ ಎರಡನೇ ಬಾರಿ ಅಧ್ಯಕ್ಷರಾಗಿ ಇತಿಹಾಸ ನಿರ್ಮಿಸಿದರು.
ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾ ಬರಲಾಗುತ್ತಿತ್ತು. ಆದರೆ ಈ ಸಲ ಡಾ| ಶರಣಬಸಪ್ಪ ಹರವಾಳ ಅವರು ಎದುರಿನ ಭೀಮಳ್ಳಿ ಪೆನ್‌ಲ್‌ದಿಂದ ಆಯ್ಕೆಯಾಗುವ
ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಡಾ| ಶರಣಬಸಪ್ಪ ಹರವಾಳ ಅವರು 848 ಮತ ಪಡೆದು ಅತ್ಯಧಿಕ 475 ಮತಗಳ ಅಂತರದಿಂದ ಚುನಾಯಿತರಾಗಿದ್ದಾರೆ. ಹಾಲಿ ಉಪಾಧ್ಯಕ್ಷ ಡಾ|
ಶಿವಾನಂದ ದೇವರಮನಿ 373 ಹಾಗೂ ಆರ್. ಎಸ್. ಹೊಸಗೌಡ 226 ಮತ ಪಡೆದು ಸೋಲು ಅನುಭವಿಸಿದರು.
Related Articles
ನ ಓರ್ವರು ಮಾತ್ರ ಗೆಲುವು ಸಾಧಿ ಸಿದ್ದಾರೆ. ಡಾ| ಶರಣಬಸಪ್ಪ ಹರವಾಳ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಹಾಲಿ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಸಂಸ್ಥೆ ಮಾಜಿ ಕಾರ್ಯದರ್ಶಿ ಆರ್.ಎಸ್. ಹೊಸಗೌಡ ಹೀನಾಯ ಸೋಲು ಅನುಭವಿಸಿದ್ದಾರೆ.
Advertisement
ಆಡಳಿತ ಮಂಡಳಿ ಸದಸ್ಯರ ಆಯ್ಕೆ-ಪಡೆದ ಮತ:ಡಾ| ಮಹಾದೇವಪ್ಪ ರಾಂಪೂರೆ 787, ಶರಣಬಸಪ್ಪ ಕಾಮರೆಡ್ಡಿ 688, ಡಾ| ನಾಗೇಂದ್ರ ಮಂಠಾಳೆ 680, ಅರುಣಕುಮಾರ ಎಂ.ಪಾಟೀಲ 649, ಬಸವರಾಜ
ಖಂಡೇರಾವ್ 587, ಡಾ| ಕೈಲಾಶ ಬಿ.ಪಾಟೀಲ 581, ವಿನಯ ಪಾಟೀಲ 570, ಸೋಮನಾಥ ನಿಗ್ಗುಡಗಿ 567, ಡಾ| ರಜನೀಶ ವಾಲಿ 544, ಅನಿಲಕುಮಾರ
ಪಟ್ಟಣ 536, ಗಿರಿಜಾ ಶಂಕರ 534, ಡಾ| ಜಗನ್ನಾಥ ಬಿಜಾಪುರ 524 ಹಾಗೂ ಸಾಯಿನಾಥ ಪಾಟೀಲ 516 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಗೆದ್ದ ವೈದ್ಯರು: ಎಚ್‌ಕೆಇ ಪ್ರಸ್ತುತ ಚುನಾವಣೆಯಲ್ಲಿ ವೈದ್ಯರೇ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸಿರುವುದು ವಿಶೇಷವಾಗಿದೆ. ಅಧ್ಯಕ್ಷ ಡಾ| ಭೀಮಾಶಂಕರ
ಬಿಲಗುಂದಿ ಸೇರಿದಂತೆ ಡಾ| ಶರಣಬಸಪ್ಪ ಹರವಾಳ, ಡಾ| ಶರಣಬಸಪ್ಪ ಕಾಮರೆಡ್ಡಿ, ಡಾ| ನಾಗೇಂದ್ರ ಮಂಠಾಳೆ, ಡಾ| ಕೈಲಾಶ ಪಾಟೀಲ, ಡಾ| ರಜನೀಶ ವಾಲಿ, ಡಾ| ಜಗನ್ನಾಥ ಬಿಜಾಪುರ, ಡಾ| ಅನಿಲಕುಮಾರ ಪಟ್ಟಣ, ಡಾ| ಮಹಾದೇವಪ್ಪ ರಾಂಪೂರೆ ಗೆಲುವಿನ ನಗೆ ಬೀರಿದ್ದಾರೆ. ಚುನಾವಣೆ ಅಧಿಕಾರಿ ಸಿ.ಸಿ. ಪಾಟೀಲ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಡಾ| ಸಿದ್ದರಾಮ ಪಾಟೀಲ ಭೈರಾಮಡಗಿ, ಕೃಷಿ ಜಂಟಿ ನಿರ್ದೇಶಕ
ರತೇಂದ್ರನಾಥ ಸೂಗೂರ ಚುನಾವಣೆ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಗೆದ್ದವರು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಪಾರದರ್ಶಕ ಆಡಳಿತ, ಅಭಿವೃದ್ಧಿ ನಿಲುವು ಹಾಗೂ ಸಂಸ್ಥೆಯ ಸರ್ವೋತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪಂಚಸೂತ್ರಕ್ಕೆ ಮತದಾರರು ಬೆಂಬಲಿಸಿದ್ದು, ಮತದಾರರಿಗೆ ಅಭಿನಂದಿಸುವೆ. ಚುನಾವಣೆ ವೇಳೆ ಮತದಾರರಿಗೆ ನೀಡಿದ ಭರವಸೆಯಂತೆ ಕಾರ್ಯ ನಿರ್ವಹಿಸುವೆ.
ಡಾ| ಭೀಮಾಶಂಕರ ಬಿಲಗುಂದಿ,
ಅಧ್ಯಕ್ಷ, ಎಚ್‌ಕೆಇ