Advertisement
ಇನ್ನೊಂದೆಡೆ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ಕೇಂದ್ರದ ವಿರುದ್ಧ ಹೋರಾಟ ಮಾಡುತ್ತಿರುವ ನಾವು ಇದೀಗ ನಮ್ಮದೇ ಪಾಲುದಾರಿಕೆ ಇರುವ ಸರ್ಕಾರ ಬೆಲೆ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂದು ಕಾಂಗ್ರೆ ಸ್ ಶಾಸ ಕರು ಸಮ ನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಳಿ ಅವಲತ್ತು ಕೊಂಡಿದ್ದಾರೆ.ಮತ್ತೂಂದೆಡೆ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಯಾವುದೇ ಹೊಸ ಕಾರ್ಯಕ್ರಮ ನೀಡದ ಬಗ್ಗೆ ಮತ್ತೂಬ್ಬ ಹಿರಿಯ ನಾಯಕ ರೋಷನ್‌ಬೇಗ್ ಸಹ ಅಸಮಾಧಾನಗೊಂಡಿದ್ದು ಹೈಕಮಾಂಡ್‌ಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರನ್ನು ತೀರಾ ಕಂಗೆಡಿಸಿರುವುದು, ಬಜೆಟ್‌ನಲ್ಲಿ ಪೆಟ್ರೋಲ್-ಡೀಸೆಲ್, ವಿದ್ಯುತ್ ಮೇಲಿನ ತೆರಿಗೆ ಹೆಚ್ಚಳದ ವಿಚಾರ. ಹಿರಿಯ ನಾಯಕರ ಸಹಿತ ಕಾಂಗ್ರೆಸ್ ಶಾಸಕರು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಇದರಿಂದ ಜನಸಾಮಾನ್ಯರ ಆಕ್ರೋಶ ಎದುರಿಸುವಂತಾಗಿದೆ. ಬಜೆಟ್ ಸಿದ್ಧತೆ ಕುರಿತು ಪೂರ್ವಭಾವಿ ಸಭೆಗೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಿರಲಿಲ್ಲ. ಡಾ.ಜಿ.ಪರಮೇಶ್ವರ್ ಅವರು ಒಂದೇ ಒಂದು ಸಭೆಗೆ ಹೋಗಿದ್ದರು. ತೆರಿಗೆ ಹೆಚ್ಚಳ ಕುರಿತು ಸಮನ್ವಯ ಸಮಿತಿಯಲ್ಲೂ ಚರ್ಚಿಸದೆ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಶಾಸ ಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಳಿ ಪತ್ರದ ಮೂಲಕ ಅಸಮಾಧಾನ ಪ್ರಕಟ
ಕಾಂಗ್ರೆಸ್‌ನ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರು, ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿರುವ ಬಗ್ಗೆ ವಿವರಿಸಿ ತಕ್ಷಣ ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೂ ಈ ಕುರಿತು ಪ್ರತ್ಯೇಕ ಪತ್ರ ಬರೆದಿದ್ದಾರೆ.
Related Articles
Advertisement
ಸಿದ್ದುಗೆ ಬರೆದ ಪತ್ರದಲ್ಲಿ ಏನಿದೆ? ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಹುದೊಡ್ಡ ಶಕ್ತಿ ನೀಡಿದ ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ಹೊಸ ಯೋಜನೆಗಳಾಗಲಿ, ಕಾರ್ಯಕ್ರಮಗಳಾಗಲಿ ವಿಶೇಷ ಹಣಕಾಸಿನ ಹಂಚಿಕೆಯಾಗಲಿ ಮಾಡಿಲ್ಲ. ನಮ್ಮ ಪಕ್ಷಕ್ಕೆ ಶಕ್ತಿ ನೀಡಿದ ಸಮುದಾಯವನ್ನು ಮೊದಲ ಬಜೆಟ್‌ನಲ್ಲೇ ನಿರ್ಲಕ್ಷಿಸಲಾಗದು. ವಿಶೇಷ ಹಂಚಿಕೆ, ಘೋಷಣೆ ಮಾಡಬೇಕಾದದ್ದು ಅತ್ಯಂತ ಅಗತ್ಯ. ಬಹಳಷಟು ಕಾರ್ಯಕ್ರಮಗಳು ಹಂಚಿಕೆ ಮುಖಾಂತರ ಪ್ರಕಟಿಸಲಾಗಿದೆ. ಸಹಜವಾಗಿ ಅಲ್ಪಸಂಖ್ಯಾತ ಸಮುದಾಯದ ಅಂಥದೇ ನಿಲುವುಗಳನ್ನು ಅಪೇಕ್ಷಿಸುವುದು ಸಹಜ. ಉತ್ತರ ಕರ್ನಾಟದ ವಿಷಯವಾಗಿ 1999-2004 ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತ್ತು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ 2004-2006 ಮತ್ತು 2013-2018 ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಕಾರ್ಯಕ್ರಮ ರೂಪಿಸಿ ಪ್ರಾದೇಶಿಕ ಅಸಮತೋಲನ ಸಮತೋಲನಗೊಳಿಸಲು ಪ್ರಯತ್ನ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರದ ಇ ಸಂದರ್ಭದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಲು ಕೆಲವು ಕಾರ್ಯಕ್ರಮ ಘೋಷಣೆ ಮಾಡುವುದು ಸೂಕ್ತ. ದಯವಿಟ್ಟು ಈ ವಿಷಯವನ್ನು ಸಮನ್ವಯ ಸಮಿತಿಯ ತುರ್ತು ಸಭೆ ಕರೆದು ಈ ಎರಡೂ ಗಂಭೀರ ವಿಷಯಗಳ ಬಗ್ಗೆ ಪರಿಹಾರ ದೊರಕಿಸಿಕೊಡಲು ಕೋರುವೆ.. ಸಿಎಂಗೆ ಬರೆದಿದ್ದೇನು?
ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳ ಗೆಲುವಿಗೆ ಕಾರಣೀಕರ್ತರಾಗಿರುವ ಅಲ್ಪಸಂಖ್ಯಾ ತರ ಕಲ್ಯಾಣಕ್ಕಾಗಿ ಕೆಲವಾದರೂ ಹೊಸ ಕಾರ್ಯಕ್ರಮಗಳು ಬಜೆಟ್‌ನಲ್ಲಿ ಪ್ರಕಟಗೊಳ್ಳಬೇಕಿತ್ತು. ಅಲ್ಪಸಂಖ್ಯಾತರ ಮತ್ತು
ಅಲ್ಪಸಂಖ್ಯಾತ ಬಡವರ ಪರವಾಗಿ ಹಣಕಾಸಿನ ವಿಶೇಷ ಹಂಚಿಕೆ ಮುಂಗಡ ಪತ್ರದಲ್ಲಿ ಕಾಣಬೇಕಿತ್ತು. ಉತ್ತರ ಕರ್ನಾಟಕದ ಜನತೆ ಸಾಕಷ್ಟು ಅಪೇಕ್ಷೆ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದರು.ಉತ್ತರ ಕರ್ನಾಟಕದವರಿಗೆ ನಿರಾಸೆಯಾಗಿದೆ. ಅಲ್ಲಿನ ಜನರ ಭಾವನೆಗಳಿಗೆ ಘಾಸಿಯಾಗಿದೆ.ಜನರ ಭಾವನೆಗಳನ್ನು ಗೌರವಿಸುವುದು ಪ್ರಸ್ತುತ ಸಮ್ಮಿಶ್ರ ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದು.