Advertisement

ಗ್ರಾಮೀಣ ಸಂಸ್ಕೃತಿ ಎತ್ತಿ ಹಿಡಿದ ಮತದಾರ

06:44 PM Jan 01, 2021 | Team Udayavani |

ಗದಗ: ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಚುನಾವಣಾ ಆಯೋಗ ಮತ್ತು ಸ್ಥಳೀಯ ಅಧಿಕಾರಿಗಳು ಕೆಲವರು ತಪ್ಪುಗಳನ್ನು ಮಾಡಿದರೂ ಗ್ರಾಮೀಣ ಜನರು ಶಾಂತಿಯುತವಾಗಿನಡೆದುಕೊಳ್ಳುವ ಮೂಲಕ ಪ್ರಜಾಪ್ರಭುತ್ವದಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಈ ಮೂಲಕಜಿಲ್ಲೆಯ ಜನರು ಗ್ರಾಮೀಣ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

Advertisement

ನಗರದ ಕಾಟನ್‌ಸೇಲ್‌ ಸೋಸಾಯಿಟಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ಮತ ಎಣಿಕೆ ವೇಳೆ ಅಲ್ಪಸ್ವಲ್ಪ ಮತಗಳಿಂದ ಸೋತವರು ಮರು ಎಣಿಕೆಗೆಕೋರಿಕೆ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸುವಬದಲಾಗಿ ಸಮಯದ ಅಭಾವದ ನೆಪವೊಡ್ಡಿ ಅಧಿಕಾರಿಗಳು ತಳ್ಳಿಹಾಕಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಜನರು ಶಾಂತಿಯಿಂದ ಅಧಿಕಾರಿಗಳ ನಿರ್ಣಯಗಳಿಗೆ ಗೌರವ ಸೂಚಿಸಿರುವುದು ಅಭಿನಂದನೀಯ ಎಂದರು.

ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ನಾಯಕರ ರಾಜಕೀಯ ಮೇಲಾಟದ ಮಧ್ಯೆಯೂ ಕಾಂಗ್ರೆಸ್‌ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿದ್ದಾರೆ. ಗದಗ ತಾಲೂಕಿನ ಒಟ್ಟು 226ರಲ್ಲಿಸದಸ್ಯರಲ್ಲಿ ನೀಲಗುಂದಲ್ಲಿ ನೂತನ ಗ್ರಾಪಂಗೆಆಗ್ರಹಿಸಿ 7 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೇ,ಖಾಲಿ ಉಳಿದಿವೆ. ಒಟ್ಟು 219 ಸ್ಥಾನಗಳಲ್ಲಿ ಕಾಂಗ್ರೆಸ್‌ಕಾರ್ಯಕರ್ತರು, ಪಕ್ಷದ ಕಡೆಗೆ ಒಲವಿದ್ದ 161 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಬಿಜೆಪಿಗೆಒಲವಿದ್ದವರು 48 ಅಭ್ಯರ್ಥಿಗಳು ಹಾಗೂ ಇತರೆ10 ಜನ ಆಯ್ಕೆ ಆಗಿದ್ದಾರೆ. ಅದರಲ್ಲೂ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 12 ಗ್ರಾಪಂಗಳಲ್ಲಿ 11 ಗ್ರಾಪಂಗಳು ಕಾಂಗ್ರೆಸ್‌ ಕಾರ್ಯಕರ್ತರೇ ಮೇಲುಗೈ ಸಾಧಿಸಿದ್ದಾರೆ. ಇನ್ನುಳಿದ ಒಂದು ಗ್ರಾಪಂನಲ್ಲಿ ಬಿಜೆಪಿ ಕಾಂಗ್ರೆಸ್‌ ಸಮಬಲ ಸಾಧಿಸಿದೆ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿದ್ದಾಗ ಗ್ರಾಮಗಳು ನೈಜ ಅಭಿವೃದ್ಧಿಯಾಗಬೇಕು. ಗ್ರಾಮಗಳು ಸ್ವಾವಲಂಬಿಗಳಾಗಬೇಕು. ಗ್ರಾಮಸ್ಥರ ಬದುಕಿನಲ್ಲಿನಗು ಮೂಡಬೇಕು ಎನ್ನುವ ಉದ್ದೇಶದಿಂದಕಾನೂನನ್ನು ಬದಲಾವಣೆ ಮಾಡುವ ಮೂಲಕಕ್ರಾಂತಿಕಾರಿ ಬದಲಾವಣೆಯತ್ತ ಹೆಜ್ಜೆ ಇಡಲಾಗಿತ್ತು. ಕರ್ನಾಟಕ ಗ್ರಾಮ ಸ್ವರಾಜ ಹಾಗೂ ಪಂಚಾಯತ ರಾಜ್‌ ಕಾನೂನುಗಳ ಮೂಲಕ ಪಂಚಾಯತಿಗಳನ್ನು ಬಲಪಡಿಸಲು ಕಾನೂನು ರೂಪಿಸಲಾಗಿದೆ. ನೂತನ ಪಂಚಾಯತಿ ಸದಸ್ಯರು ಗಾಂಧೀಜಿ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಸಲಹೆ ನೀಡಿದರು.

Advertisement

ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ಗಾಂಧಿಧೀಜಿ ಕನಸಿನ ಸ್ವರಾಜ ಅನುಷ್ಠಾನಗೊಳಿಸುವಲ್ಲಿ ರಾಜ್ಯದ ಯೋಜನೆಗಳು ಜನರ ಯೋಜನೆಗಳುಆಗಬೇಕೇ ವಿನಃ ಜನಪ್ರತಿನಿಧಿಗಳ ಯೋಜನೆ ಆಗಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪಕ್ಷದ ಪ್ರಮುಖರಾದ ಗುರಣ್ಣ ಬಳಗಾನೂರ, ಪ್ರಭು ಬುರಬುರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next