Advertisement

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನಿಧನಕ್ಕೆ ಎಚ್.ಕೆ.ಪಾಟೀಲ ಸಂತಾಪ

07:20 PM May 26, 2021 | Team Udayavani |

ಬೆಂಗಳೂರು : ನಾಡಿನ ಹಿರಿಯ ಚೇತನ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಪತ್ರಿಕೋದ್ಯಮಿ, ಸ್ವಾತಂತ್ರ್ಯ ಯೋಧ ಎಚ್.ಎಸ್.ದೊರೆಸ್ವಾಮಿ ಅವರ ನಿಧನದಿಂದ ಕನ್ನಡನಾಡು ಬಡವಾಗಿದೆ. ಕರ್ನಾಟಕದಲ್ಲಿ ಸಾರ್ವಜನಿಕ ಆಸ್ತಿ ಯನ್ನು ರಕ್ಷಿಸಲು ಹೋರಾಟ ಮಾಡಿ ಕಿರೀಟ ಸದೃಶ ಖ್ಯಾತಿ ಪಡೆದವರು. ಭ್ರಷ್ಟಾಚಾರದ ವಿರುದ್ಧ ಅವರ ಹೋರಾಟ ಗ್ರಾಮೀಣಾಭಿವೃದ್ಧಿ ಪರ ಅವರ ಕಳಕಳಿ ನಾಡಿನ ಜನತೆಯಿಂದ ಅಪಾರ ಮೆಚ್ಚುಗೆ ಪಡೆದಿತ್ತು ಎಂದು ಎಚ್.ಕೆ.ಪಾಟೀಲ ಸಂತಾಪ ಸೂಚಿಸಿದ್ದಾರೆ.

Advertisement

ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ಅನುಯಾಯಿಯಾಗಿದ್ದ ಎಚ್.ಎಸ್.ದೊರೆಸ್ವಾಮಿ ಅವರು ಸಮಾಜದಲ್ಲಿ ಪರಿವರ್ತನೆ ತರಲು, ಅನ್ಯಾಯ ಹಾಗೂ ಅಸಮಾನತೆ ವಿರುದ್ಧ ಸದಾವಕಾಲ ಹೋರಾಟದಲ್ಲಿ ತೊಡಗಿರುತ್ತಿದ್ದ ಅವರ ಬದುಕು ಸಾರ್ವಜನಿಕ ಜೀವನದಲ್ಲಿರುವ ನಮಗೆಲ್ಲ ಮಾರ್ಗದರ್ಶನಕ, ಪ್ರೇರಕ ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿ ಜೊತೆಗಿನ ತಮ್ಮ ಸಂಬಂಧ ಮೆಲುಕು ಹಾಕಿದ ಎಚ್.ಕೆ.ಪಾಟೀಲರು ಜನತೆಗೆ ಒಳ್ಳೆಯದಾಗುತ್ತದೆ ಎಂದಾದರೆಅತಿಥಿ ಯಾಗಿಯೇ ಪಾಲ್ಗೊಳ್ಳಬೇಕೆಂದವರಲ್ಲ ಯಾವುದನ್ನು ಲೆಕ್ಕಿಸದೆ ಅವರು ಅಲ್ಲಿ ಪಾಲ್ಗೊಳ್ಳುತ್ತಿದ್ದರು.

2012ರಲ್ಲಿ ಜನ ಸಾಮಾನ್ಯರಿಗಾಗಿ ಶುದ್ಧ ಕುಡಿಯುವ ನೀರಿನ ಆಂದೋಲನದ ಅಂಗವಾಗಿ ಹುಬ್ಬಳ್ಳಿ ಸಮೀಪದ ಗ್ರಾಮವೊಂದರಲ್ಲಿ (ಹೆಬಸೂರ) ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲು ಧಾರವಾಡಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಅವರನ್ನು ಆಮಂತ್ರಿಸಿದಾಗ ಓಹ್ ಇದು ಒಳ್ಳೆಯ ಕಾರ್ಯಕ್ರಮ ಬರುವೆ ಎಂದು ಅಂದೇ ಬಂದು ನೀರಿನ ಘಟಕ ಉದ್ಘಾಟಿಸಿ, ಸಂಭ್ರಮಿಸಿ ಗ್ರಾಮೀಣ ಜನರ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸಿ ಯುವಕರಲ್ಲಿ ಸ್ಫೂರ್ತಿ ತುಂಬಿದ್ದರು.

ಹಿರಿಯ ಚೇತನ ದೊರೆಸ್ವಾಮಿ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರು ನಡೆದ ದಾರಿಯಲ್ಲಿ ಸಾಗಿ ಸಾರ್ವಜನಿಕ ಹಿತ ಕಾಪಾಡುವ ಹೋರಾಟ ಮುಂದುವರೆಸುವುದೆ ನಾವು ಅವರಿಗೆ ಸಲ್ಲಿಸಬೇಕಾದ ಗೌರವ, ಶೃದ್ಧಾಂಜಲಿ. ದೊರೆಸ್ವಾಮಿ ಅವರ ನಿಧನದಿಂದಾಗಿ ಸ್ವಾತಂತ್ರ್ಯ ಹೋರಾಟದ ಗಾಂಧೀ ಕೊಂಡಿ ಕಳಚಿದೆ. ಸಾರ್ವಜನಿಕ ಕ್ಷೇತ್ರ ಬಡವಾಯಿತು. ಇದು ತುಂಬಲಾರದ ನಷ್ಟ ಎಂದು ಪಾಟೀಲರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next