ಎಚ್‌ಐವಿ ಇರುವವರಿಗೆ ಕೋವಿಡ್ ಸೋಂಕು ತಾಗಿದರೆ ಅವರಿಗೆ ಅದು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಗಳಿರುತ್ತವೆ ಎಂದು ವೈದ್ಯಲೋಕ ಹೇಳುತ್ತದೆ.
ಆದರೆ, ಅಹಮದಾಬಾದ್ ಜಿಲ್ಲೆಯ ವೀರಂಗಮ್ ತಾಲೂಕಿನ ಕುಮಾರ್‌ಖಾನ್ ಎಂಬ ಹಳ್ಳಿಯ ಎಚ್‌ಐವಿ ಪಾಸಿಟಿವ್ ಹೊಂದಿರುವ ಯುವಕನೊಬ್ಬ ಕೋವಿಡ್ ವಿರುದ್ಧದ ಯುದ್ಧ ಗೆದ್ದು ಬಂದು ಹೊಸ ಇತಿಹಾಸ ಬರೆದಿದ್ದಾನೆ.
ಸಾಮಾನ್ಯವಾಗಿ, ಆರೋಗ್ಯವಂತ ಪುರುಷರಲ್ಲಿ, ಬ್ಲಡ್ ಹಿಮೋಗ್ಲೋಬಿನ್ ಪ್ರತಿ ಡೆಸಿಲೀಟರಿಗೆ 13.5ರಿಂದ 17.5ರಷ್ಟಿರಬೇಕು. ಕೋವಿಡ್ ಸೋಂಕಿನಿಂದ ಅಹ್ಮದಾಬಾದ್‌ನ ಅಸಾರ್ವಾ ಎಂಬ ಆಸ್ಪತ್ರೆಗೆ ದಾಖಲಾಗಿದ್ದಾಗ ಈತನ ಬ್ಲಡ್ ಹಿಮೋಗ್ಲೋಬಿನ್ ಪ್ರತಿ ಡೆಲಿಲೀಟರ್‌ಗೆ ಕೇವಲ 2.3 ಗ್ರಾಂ.ನಷ್ಟಿತ್ತು. ಆದ್ದರಿಂದ ಈತನ ಕೇಸ್, ಆಸ್ಪತ್ರೆಯ ವೈದ್ಯರಿಗೆ ಸವಾಲಾಗಿತ್ತು.
ಸುಮಾರು 20 ದಿನ ಆಸ್ಪತ್ರೆಯಲ್ಲಿದ್ದ ಈತನಿಗೆ ಎರಡು ಬಾರಿ ರಕ್ತದಾನ ಮಾಡಲಾಗಿತ್ತು. ಎಚ್‌ಐವಿಗೆ ಈತ ತಗೆದುಕೊಳ್ಳುತ್ತಿದ್ದ ಔಷಧಿಗಳು ಹಾಗೂ ಕೋವಿಡ್ ಚಿಕಿತ್ಸೆಯನ್ನು ಒಟ್ಟೊಟ್ಟಿಗೇ ನಡೆಸಲಾಗಿತ್ತು. ಕ್ರಮೇಣ ಈತನ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡು, ಇದೀಗ ಈ ಯುವಕ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.
ಹಾಗೂ ಈ ಮೂಲಕ ಎಚ್‌ಐವಿ ಸೋಂಕಿತರೂ ಸಹ ಕೋವಿಡ್ ಗೆಲ್ಲಬಹುದು ಎಂಬುದನ್ನು ಈ ಯುವಕ ಸಾಬೀತು ಮಾಡಿದ್ದಾರೆ. ಔಷಧಿಗಿಂತ ಹೆಚ್ಚಾಗಿ, ಆತನ ಮಾನಸಿಕ ಸ್ಥೈರ್ಯವೇ ಆತನನ್ನು ಕಾಪಾಡಿದೆ.
– ಅರುಣ್ ಮಹೇಶ್‌ಬಾಬು, ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಒ)