Advertisement

ಹಿಟ್ಲರ್‌ ವಾಚ್‌: 2ನೇ ಮಹಾಯುದ್ಧದಲ್ಲಿ ಅಳಿದುಳಿದ ಸಾಮಗ್ರಿ ಎಂಬ ಹೆಗ್ಗಳಿಕೆ

10:08 AM Jul 31, 2022 | Team Udayavani |

ವಾಷಿಂಗ್ಟನ್‌: ಜರ್ಮನಿಯಲ್ಲಿ ಆಡಳಿತ ನಡೆಸಿ, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನಾಜಿ ನಾಯಕ ಅಡೋಲ್ಫ್ ಹಿಟ್ಲರ್‌ ಅವರ ಕೈ ಗಡಿಯಾರವೊಂದನ್ನು ಇತ್ತೀಚೆಗೆ ಹರಾಜು ನಡೆಸಲಾಗಿದೆ. ಬರೋಬ್ಬರಿ 8.7 ಕೋಟಿ ರೂ.ಗೆ ಹಿಟ್ಲರ್‌ ಅವರ ವಾಚು ಹರಾಜಾಗಿದೆ.

Advertisement

ಅಮೆರಿಕದ ಅಲೆಕ್ಸಾಂಡರ್‌ ಐತಿಹಾಸಿಕ ಹರಾಜು ಸಂಸ್ಥೆಯು ಈ ಹರಾಜನ್ನು ನಡೆಸಿಕೊಟ್ಟಿದೆ. ಅದನ್ನು ಹರಾಜು ಸಂಸ್ಥೆಯು ವೆಬ್‌ಸೈಟ್‌ನಲ್ಲಿ “ಐತಿಹಾಸಿಕ ವಿಶ್ವಯುದ್ಧ 2ರ ಅಳಿದುಳಿದ ಅವಶೇಷ’ ಎಂದು ಹೆಸರಿಸಿತ್ತು. ಹ್ಯೂಬರ್‌ ವಾಚ್‌ ಸಂಸ್ಥೆಗೆ ಸೇರಿರುವ ಈ ವಾಚನ್ನು 1930ರ ದಶಕದಲ್ಲಿ ಹಿಟ್ಲರ್‌ ಅವರಿಗೆ ಅವರ ಜನ್ಮದಿನದ ಪ್ರಯುಕ್ತ ಉಡುಗೊರೆಯಾಗಿ ಕೊಡಲಾಗಿತ್ತು ಎಂದು ಹೇಳಲಾಗಿದೆ.

ವಾಚ್‌ ವಿಶೇಷತೆ:
ಇದೊಂದು ರಿವರ್ಸಿಬಲ್‌ ವಾಚ್‌. ಕಪ್ಪು ಬಣ್ಣದ ಬೆಲ್ಟ್ ಇದೆ. ವಿಶೇಷವಾಗಿ ವಾಚ್‌ ಮೇಲ್ಮೆ„ ನೋಡಿದರೆ ನಿಮಗೆ ಸ್ವಸ್ಥಿಕ್‌ ಚಿಹ್ನೆ, ಎಚ್‌ಎಚ್‌ ಬರಹ ಮತ್ತು ಮೂರು ವಿಶೇಷ ದಿನಾಂಕಗಳನ್ನು ಕಾಣಬಹುದು.

ಹಿಟ್ಲರ್‌ ಜನ್ಮದಿನ, ಹಿಟ್ಲರ್‌ ಚಾನ್ಸಲರ್‌ ಆದ ದಿನ ಹಾಗೂ 1933ರ ನಾಜಿ ಪಕ್ಷವು ಚುನಾವಣೆಯನ್ನು ಗೆದ್ದ ದಿನವನ್ನು ಅದರಲ್ಲಿ ನಮೂದಿಸಲಾಗಿದೆ. ವಾಚ್‌ನ ಮೇಲ್ಮೈ ಯನ್ನು ತಿರುವಿಸಿದರೆ ನಿಮಗೆ ಅಲ್ಲಿ ಗಡಿಯಾರ ಕಾಣಸಿಗುತ್ತದೆ.

1945ರಲ್ಲಿ ಹಿಟ್ಲರ್‌ನ ಮನೆ ಮೇಲೆ ಫ್ರಾನ್ಸ್‌ ಸೈನಿಕರು ದಾಳಿ ನಡೆಸಿದ ಸಮಯದಲ್ಲಿ ಈ ವಾಚ್‌ನ್ನು ತಮ್ಮ ವಶಕ್ಕೆ ಪಡೆದಿರುವುದಾಗಿ ಹೇಳಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next