Advertisement

ಹಿಟ್ಲರ್‌ ಫೋನು 1.60 ಕೋಟಿ ರೂ.ಗೆ ಹರಾಜು!

03:45 AM Feb 21, 2017 | Team Udayavani |

ವಾಷಿಂಗ್ಟನ್‌: ಅಡಾಲ್ಫ್ ಹಿಟ್ಲರ್‌ ಹಲೋ ಎಂದಿದ್ದ ಟೆಲಿಫೋನ್‌ ಈಗ ಭರ್ಜರಿ ಸುದ್ದಿಯಲ್ಲಿದೆ! ಜರ್ಮನಿಯ ಸರ್ವಾಧಿಕಾರಿ ಬಳಸಿದ್ದ ದೂರವಾಣಿಯನ್ನು ಹರಾಜು ಹಾಕಲಾಗಿದ್ದು, 1.60 ಕೋಟಿ ರೂಪಾಯಿಗೆ ಬಿಕರಿಯಾಗಿದೆ. 

Advertisement

1945ರ ಮಹಾಯುದ್ಧದಲ್ಲಿ ಜರ್ಮನ್‌ ಸೇನಾಪಡೆ ಸೋತ ಮೇಲೆ ಬರ್ಲಿನ್‌ ಬಂಕರ್‌ನಲ್ಲಿ ಈ ಫೋನ್‌ ಅನ್ನು ಅಮೆರಿಕದ ಸೈನಿಕರು ವಶಪಡಿಸಿಕೊಂಡಿದ್ದರು. ಕಪ್ಪು ಬೇಕ್‌ಲೈಟ್‌ ಫೋನ್‌ ಇದಾಗಿದ್ದು, ನಂತರದಲ್ಲಿ ಇದಕ್ಕೆ ಕಡುಗೆಂಪು ಬಣ್ಣವನ್ನು ಬಳಿಯಲಾಗಿತ್ತು. ಇದರ ಮೇಲಿನ ಅಡಾಲ್ಫ್ ಹಿಟ್ಲರ್‌ ಹೆಸರು ಇನ್ನೂ ಹಾಗೆಯೇ ಇದೆ. ಅಲೆಕ್ಸಾಂಡರ್‌ ಐತಿಹಾಸಿಕ ಹರಾಜು ಸಂಸ್ಥೆ ಇದನ್ನು ಹರಾಜಿಗಿಟ್ಟಿತ್ತು. 1ರಿಂದ 2 ಕೋಟಿ ರೂ.ವರೆಗೆ ಬಿಕರಿ ಆಗಬಹುದು ಎಂದು ಅಂದಾಜಿಸಿದ್ದ ಸಂಸ್ಥೆಗೆ ಕೊನೆಗೂ ಮೋಸ ಆಗಲಿಲ್ಲ. ಹರಾಜಿಗೆ ಪಡೆದ ವ್ಯಕ್ತಿಯ ಹೆಸರನ್ನು ಸಂಸ್ಥೆ ಗೌಪ್ಯವಾಗಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next