Advertisement
ಅಂದಹಾಗೆ, ಈ ಸಿನಿಮಾದ ಹೆಸರು, “ಹಿಟ್ಲರ್’ ಅಂತಿದ್ದರೂ, ಇದೇನೂ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಯೋಪಿಕ್ ಅಲ್ಲ. ಇದೊಂದು ಔಟ್ ಆ್ಯಂಡ್ ಔಟ್ ಅಂಡರ್‌ವಲ್ಡ್ ಕಂ ಲವ್ ಕಥಾಹಂದರದ ಸಿನಿಮಾ. ಸಿನಿಮಾದ ಸಬೆjಕ್ಟ್ ಮತ್ತು ಹೀರೋ ಪಾತ್ರಕ್ಕೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ತಮ್ಮ ಸಿನಿಮಾಕ್ಕೆ “ಹಿಟ್ಲರ್’ ಎಂದು ಹೆಸರಿಡಲಾಗಿದೆ ಅನ್ನೋದು ಚಿತ್ರತಂಡದ ವಿವರಣೆ.
Related Articles
Advertisement
“ಹಿಟ್ಲರ್’ ಬಗ್ಗೆ ಮಾತನಾಡುವ ಲೋಹಿತ್, “ಸಾಮಾನ್ಯವಾಗಿ “ಹಿಟ್ಲರ್’ ಅಂದ್ರೆ ಎಲ್ಲರಿಗೂ ಉಗ್ರ ಮತ್ತು ಗಂಭೀರ ರೂಪ ಕಣ್ಮುಂದೆ ಬರುತ್ತದೆ. ಅಂಥದ್ದೇ ಪಾತ್ರ ಈ ಸಿನಿಮಾದಲ್ಲಿ ನನಗೂ ಸಿಕ್ಕಿದೆ. ಇದೊಂದು ಅಂಡರ್ ವಲ್ಡ್ ಸಬೆjಕ್ಟ್ ಆಗಿದ್ದು, ಇದರಲ್ಲಿ ನಾನು ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ.
“ಹಿಟ್ಲರ್’ ಚಿತ್ರದಲ್ಲಿ ಲೋಹಿತ್‌ಗೆ ನಾಯಕಿಯಾಗಿ ಸಸ್ಯಾ ಜೋಡಿಯಾಗಿ ದ್ದಾರೆ. ಚಿತ್ರದ 3 ಹಾಡುಗಳಿಗೆ ಆಕಾಶ್ ಪರ್ವ ಸಂಗೀತವಿದ್ದು, “ಗಾನಶಿವ ಮೂವೀಸ್’ ಬ್ಯಾನರ್‌ನಲ್ಲಿ ಮಮತಾ ಲೋಹಿತ್ “ಹಿಟ್ಲರ್’ ಚಿತ್ರವನ್ನು ನಿರ್ಮಿಸಿದ್ದಾರೆ.