Advertisement
ಗಜೇಂದ್ರಗಡ ಸಹಿತ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಅಮೂಲ್ಯ ಸಸ್ಯ ಪ್ರಭೇದಗಳು ಹುದುಗಿಕೊಂಡಿವೆ. ಈಗ ವಿಶ್ವದ ಅತ್ಯಂತ ಅಪರೂಪದ ಕೀಟವೊಂದು ಕೂಡ ಇಲ್ಲೇ ಪತ್ತೆಯಾಗಿದೆ. ಹಳದಿ ಮೈ ಬಣ್ಣದಿಂದ ಕೂಡಿದ ಈ ಸುಂದರ ಕೀಟವನ್ನು ವೈಜ್ಞಾನಿಕವಾಗಿ ಕೆಟಾಕ್ಯಾಂಥಸ್ ಇನ್‌ಕಾರ್ನೆಟಸ್ ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಎನ್ನಲಾಗುತ್ತದೆ. ಇಕೊÕàರಾ, ಗೋಡಂಬಿ ಗಿಡ, ಗುಲ್‌ಮೋಹರ್ ಮತ್ತು ಶಿವನಿ ಮರಗಳು ಈ ಕೀಟಗಳಿಗೆ ಆತಿಥೇಯ ಸಸ್ಯಗಳಾಗಿವೆ.
ಇದು 30 ಎಂಎಂ ಗಾತ್ರದ್ದಾಗಿರುತ್ತದೆ. ಆತಿಥೇಯ ಸಸ್ಯಗಳ ಎಲೆಗಳಡಿ ಹೆಣ್ಣು ಕೀಟ 150-200 ಮೊಟ್ಟೆಗಳನ್ನಿಡುತ್ತದೆ. ಹಿಟ್ಟರ್ ಕೀಟ 7ರಿಂದ 9 ತಿಂಗಳ ಜೀವಿತಾವಧಿ ಹೊಂದಿದ್ದು, ಇವು ತಮ್ಮ ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವೆ. ಪೆಂಟ್ಯಾಟೊಮಿಡೆ ಕೀಟಗಳು ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಫೇರಮೊನ್ ಸ್ರವಿಸಿ ಗುಂಪು ಗುಂಪಾಗಿ (ಅಗ್ರಿಗೇಶನ್) ಆತಿಥೇಯ ಸಸ್ಯದ ಕಾಂಡದ ಮೇಲೆ ವಾಸಿಸುತ್ತವೆ. ಈ ರಕ್ಷಣ ತಂತ್ರ ಸಂತಾನೋತ್ಪತ್ತಿಗೂ ಸಹಾಯಕವಾಗಿದೆ. ಇವು ಆತಿಥೇಯ ಸಸ್ಯದ ಎಲೆ ರಸ ಮತ್ತು ಹಣ್ಣುಗಳ ರಸವನ್ನು ಹೀರುತ್ತವೆ.
Related Articles
ಕ್ಯಾಟಕ್ಯಾಂಥಸ್ ಇನ್‌ಕಾರ್ನೆಟಸ್ ಭಾರತ, ಮಡಗಾಸ್ಕರ್, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಫೈನ್ಸ್, ಪಾಪು, ನ್ಯೂಗಿನಿಯಾ, ಜಪಾನ್ ದೇಶಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ದಕ್ಷಿಣ ಕೋರಿಯಾ ಮತ್ತು ಪಾಕಿಸ್ಥಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ.
Advertisement
ಕೀಟಗಳು ಉನ್ನತ ಸ್ತರದ ಜೀವಿಗಳಿಗೆ ಆಹಾರ ಒದಗಿಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸು ತ್ತವೆ. ಕೀಟಗಳು ನಿಸರ್ಗದಲ್ಲಿ ನೈಸರ್ಗಿಕವಾಗಿ ನಿಯಂ ತ್ರಿಸಲ್ಪಡುತ್ತವೆ. ಮಾನವ ಮುಖ ಹೋಲುವ ಅಪ ರೂಪದ ಹಿಟ್ಲರ್ ಕೀಟ ವೈಶಿಷ್ಟ್ಯ ಪೂರ್ಣವಾಗಿ ಕಾಣುತ್ತದೆ.– ಮಂಜುನಾಥ ಎಸ್. ನಾಯಕ,
ಜೀವ ವೈವಿಧ್ಯ ಸಂಶೋಧಕ