Advertisement

ಉಳ್ಳಾಲ: ಕಾರ್ಮಿಕರಿಗೆ ಅಪರಿಚಿತ ವಾಹನ ಢಿಕ್ಕಿ; ಓರ್ವ ಸಾವು

02:21 PM Aug 12, 2022 | Team Udayavani |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರು ಬಳಿ ರಸ್ತೆ ಬದಿ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕರ ಮೇಲೆ  ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

Advertisement

ಬಿಹಾರ ಮೂಲದ ಕಾರ್ಮಿಕ ವಿಕ್ಕಿ(30) ಮೃತ ದುರ್ದೈವಿ. ಬ್ರಹ್ಮಾವರದ ಗೋಪಾಲ ಪೂಜಾರಿ ಎಂಬವರು ಗಾಯಗೊಂಡಿದ್ದಾರೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಕಾರ್ಮಿಕರು ಹೆದ್ದಾರಿ ಪಕ್ಕದ ಹುಲ್ಲು ಮತ್ತು ಗಿಡಗಳನ್ನು ಕತ್ತರಿಸುವ ಕಾರ್ಯದಲ್ಲಿ ತೊಡಗಿದ್ದಾಗ ಈ ಅವಘಡ ಸಂಭವಿಸಿದ್ದು, ವಿಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಗೋಪಾಲ್ ಪೂಜಾರಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಎಸ್‌ಯುವಿ ಅಪಘಾತದಲ್ಲಿ 6 ಸಾವು: ಕಾಂಗ್ರೆಸ್ ಶಾಸಕನ ಅಳಿಯನ ವಿರುದ್ಧ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next