Advertisement

ಇತಿಹಾಸ ತಿರುಚುತ್ತಿರುವುದು ದೇಶದ ಬಹುದೊಡ್ಡ ದುರಂತ

03:44 PM Jan 08, 2018 | |

ಇಂಡಿ: ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಸಾವಿತ್ರಿಬಾಯಿ ಫುಲೆ ಸಾಮಾನ್ಯ ಮಹಿಳೆಯಲ್ಲ, ಅಸ್ಪೃಶ್ಯರಿಗೆ ಅಲ್ಪಂಖ್ಯಾತರಿಗೆ, ಹಿಂದುಳಿದವರಿಗೆ ಶಿಕ್ಷಣ ನೀಡಿ ಅಕ್ಷರದ ಕ್ರಾಂತಿಯನ್ನು ಮಾಡಿದ ಪ್ರಪ್ರಥಮ ಭಾರತ ಶಿಕ್ಷಕಿ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜಾಧ್ಯಕ್ಷ ಬಿ.ಗೋಪಾಲ ಹೇಳಿದರು.

Advertisement

ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆಯವರ 187ನೇ ಜಯಂತಿ, ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಭಾರತ ದೇಶದಲ್ಲಿ ಇತಿಹಾಸವನ್ನು ತಿರುಚಿ ಮನುವಾದಿಗಳು ಶಿಕ್ಷಕರ ದಿನವನ್ನು ಬೇರೆಯವರ ಹೆಸರಿನಲ್ಲಿ ಆಚರಣೆ ಮಾಡುತ್ತಿರುವದ ನಮ್ಮ ದೇಶದ ಅತಿ ದೊಡ್ಡ ದುರಂತ. ಕೆರಳದಲ್ಲಿ ದಲಿತ ಮಹಿಳೆಯರನ್ನು ಅಮಾನವೀಯವಾಗಿ ನಾಯರ ಸಮುದಾಯ ನಡೆಸಿಕೊಳ್ಳುತ್ತಿದ್ದರು ಇಂತಹ ಅನಿಷ್ಠ ಪದ್ಧತಿಯನ್ನು ಟಿಪ್ಪು ಸುಲ್ತಾನ್‌ ಹೋಗಲಾಡಿಸಿದ. ಇಂತಹ ಹೋರಾಟಗಾರನಿಗೆ ಮತಾಂಧರು ದೇಶದ್ರೋಹಿ ಎನ್ನುತ್ತಿರುವುದು ವಿಷಾದನೀಯ ಎಂದರು. 

ಇಡಿ ಸಮುದಾಯವನ್ನು ಜಾತ್ಯತೀತ, ಸರ್ವಧರ್ಮವನ್ನು ಸಮಾನವಾಗಿ ಗೌರವಿಸುವ ಭಾರತ ಸಂವಿಧಾನ ವಿಶ್ವವೇ ಮೆಚ್ಚುತ್ತಿರುವಾಗ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ಹೇಳಿದ್ದಾರೆ. ಇವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿರುವುದೇ ಅತ್ಯಂತ ಮೂರ್ಖತನ ಎಂದು ತರಾಟೆಗೆ ತಗೆದುಕೊಂಡರು.

ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತ ಮತಾಕೀ ಜೈ ಎಂದರೆ ಭಾರತ ಉದ್ಧಾರವಾಗುತ್ತೆಯೇ? ಭಾರತ ಕಲ್ಲು ಮಣ್ಣು ಗುಡ್ಡಗಳಿಂದ ನಿರ್ಮಾಣವಾದುದಲ್ಲ, ಪರಸ್ಪರ ಸಾಮರಸ್ಯದ ಭಾವೈಕ್ಯತೆ ಸಂಕೇತವಾಗಿದೆ. ಪ್ರಧಾನಿ ಮೋದಿಯವರೇ ಕ್ಯಾಶಲೇಸ್‌ ಮಾಡಲು ಹೊರಟಿರುವಾಗ ನೀವು ಜಾತಿ ರಹಿತ ಭಾರತ ಏಕೆ ಮಾಡುತ್ತಿಲರೆಂದು ಪ್ರಶ್ನಿಸಿದರು.

ಭಾರತ ದೇಶದಲ್ಲಿ ಮಹಿಳೆಯರನ್ನು ತಾಯಿ ಸಮಾನ ಎಂದು ಹೇಳುವ ನೀವು ಬಾಲಕಿ ಹತ್ಯಾಚಾರ, ಉತ್ತರ ಪ್ರದೇಶಲ್ಲಿ ದಲಿತ ಹೆಣ್ಣು ಮಗಳಿಗೆ ಅವಮಾನಿಸಿದ್ದು, ಕೇರಳ ರಾಜ್ಯದ ದಲಿತ ಯುವಕನಿಗೆ ಕೈ ಕತ್ತರಿಸುವಾಗ ಎಲ್ಲಿ ಹೋಯಿತು. ಮನುಸ್ಮೃತಿ ಹೆಣ್ಣು ಮಕ್ಕಳನ್ನು ಹೆರಿಗೆ ಯಂತ್ರಗಳಾಗಿ ಮಾಡಿತ್ತು. ಆದರೆ ಸಾವಿತ್ರಿಬಾಯಿ ಫುಲೆ ಸಾಮಾಜಿಕ ಸಮಾನತೆ ತರಲು ಶ್ರಮಿಸಿದ ಮಹಾ ದಿವ್ಯಚೇತನ.
 
ಅಂದು ದುಂಡುಮೇಜಿನ ಸಭೆಯಲ್ಲಿ ಮಹಾತ್ಮ ಗಾಂಧೀ ಜಿಯವರು ಮಹಿಳೆಯರ ಹಕ್ಕುಗಳ ಬಗ್ಗೆ ವಿರೋಧಿಸಿದರು. ಆದರೆ ಡಾ| ಬಾಬಾಸಾಹೇಬ ಅಂಬೇಡ್ಕರ್‌ ಸಮಾನ ಹಕ್ಕು ನೀಡಬೇಕು ಎಂದು ಕಾನೂನು ಪದವಿಗೆ ರಾಜೀನಾಮೆ ನೀಡಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದ  ಧೀಮಂತ ನಾಯಕ ಎಂದು ಹೇಳಿದರು. ಇಸ್ಲಾಂ ಧರ್ಮಗುರು ಮೌಲಾನಾ ಇಸ್ಮಾಯಿಲ್‌ ಇನಾಮದಾರ, ಪರಶುರಾಮ ಮಹಾರಾಜನವರ ಉಪನ್ಯಾಸ ನೀಡಿದರು.

Advertisement

ಅಧ್ಯಕ್ಷತೆಯನ್ನು ಭೀಮಾಶಂಕರ ಮೂರಮನ ವಹಿಸಿದ್ದರು. ಆರ್‌ಡಿ ಸಂಸ್ಥೆ ಅಧ್ಯಕ್ಷೆ ಡಿ.ಶಿರೋಮಣಿ, ಹೈಕೋರ್ಟ್‌ ವಕೀಲ ರಾಕೇಶಗೌಡ ಬಿರಾದಾರ, ಗೋಪಾಲ ಕಾರಜೋಳ, ಸಂಜಯ ಕ್ಯಾತನ್‌, ಮರೆಪ್ಪಾ ಕಾಳೆ, ಪರಶುರಾಮ ಮಹಾರಾಜನವರ, ಸಾಯಬಣ್ಣ ಆಸಂಗಿ, ಸ್ಟೀಫನ್‌ ಶಿರೋಮಣಿ, ಸಂಗಯ್ನಾಸ್ವಾಮಿ ಹಿರೇಮಠ ವೇದಿಕೆಯಲ್ಲಿದ್ದರು.

ಸುಧಾಕರಗೌಡ ಬಿರಾದಾರ, ರಾಜಶೇಖರ ಹಳ್ಳದಮನಿ, ನಿಲೇಶ ಹಂಜಗಿ, ಅರವಿಂದ ವಠಾರ, ನೀತಿನ ಬನಸೋಡೆ, ಶರಣು ಹಾದಿಮನಿ, ಮಲ್ಲು ಮಡ್ಡಿಮನಿ, ಕಲ್ಲಪ್ಪ ಅಂಜುಟಗಿ, ಎಸ್‌.ಟಿ.ಪಾಟೀಲ, ಧರ್ಮು ಕಾಂಬಳೆ, ಶಿವಾನಂದ ಮಾವಿನಹಳ್ಳಿ, ವಿಠ್ಠಲ ಪಡನೂರ, ಪ್ರಕಾಶ ಹೊಸಮನಿ, ಅಜರ ಶೇಖ, ಸುಮಿತ ಮೂರಮನ್‌, ಮಧುಸೂಧನ ತಳಕೆರಿ, ಸುದರ್ಶನ ಶಿವಶರಣ, ವಿಶದನಾಥ ಬನಸೋಡೆ,ಗಣಪತಿ ಹೊಸಮನಿ, ಶಿವಾನಂದ ಶಿಂಗೆ,ಶಿವಾನಂದ ಹರಿಜನ, ಸಿದ್ದಾರ್ಥ ಹಳ್ಳದಮನಿ, ಪರಶುರಾಮ ಕೆರೂಟಗಿ , ವಿಠ್ಠಲ ಬೇವಿನಕಟ್ಟಿ ಸೇರಿದಂತೆ ಅನೇಕರಿದ್ದರು. ಪಿ.ಡಿ. ತೋಟದ ಸ್ವಾಗತಿಸಿದರು. ಎಸ್‌.ಆರ್‌.ಮಾಡ್ಯಾಳ ನಿರೂಪಿಸಿದರು. ನಾಗೇಶ ಶಿವಶರಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next