Advertisement

ಭಾಗವತರ ಚರಿತೆಯ ಮೂಲಕ ಯಕ್ಷಗಾನದ ಚರಿತ್ರೆ

06:42 PM Jun 01, 2019 | Team Udayavani |

ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ “ಶತಸ್ಮತಿ’ ಎಂಬ ಪದ ವಿಶೇಷ ಮಹತ್ವವನ್ನು ಪಡೆದಿದೆ. ಅನೇಕ ಕಲಾವಿದರ ನೂರರ ನೆನಪಿನ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ. ಶತಸ್ಮತಿ ಸಂಪುಟಗಳೂ ಪ್ರಕಟವಾಗಿ ಯಕ್ಷಗಾನದ ಇತಿಹಾಸದ ಅಪೂರ್ವ ದಾಖಲೆ ಎನಿಸುತ್ತಿವೆ. ಇವೆಲ್ಲದರ ನಡುವೆ, ಬಡಗುತಿಟ್ಟು ಯಕ್ಷಗಾನದಲ್ಲಿ ಭಾಗವತಿಕೆಯಲ್ಲಿ ನವ‌ ಮಾರ್ಗಪ್ರವರ್ತಕರೆನಿಸಿದ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು ಮಾತ್ರ ವಿಶೇಷವಾಗಿ ಗಮನಸೆಳೆಯುತ್ತದೆ. ಭಕ್ತಿ¤ಪರಂಪರೆಯ “ಭಾಗವತ’ ಎಂಬ ಪದದ ಅರ್ಥವಂತಿಕೆಗೆ ಅನುಗುಣವಾಗಿ, ಯಕ್ಷಗಾನದ “ಭಾಗವತ’ನ ಉಪಾಧಿಯ ಘನತೆಗೆ ತಕ್ಕುದಾಗಿ ಬದುಕಿದ ನಾರ್ಣಪ್ಪ ಉಪ್ಪೂರರ ನೂರು ವರ್ಷಗಳ ಬದುಕೆಂದರೆ, ಅದರೊಳಗೆ ನೂರಾರು ಕಲಾವಿದರ ಜೀವನಕಥನಗಳೂ ಅಡಕವಾಗಿವೆ. ರಂಗದ ಮೇಲೆ ಕಲಾವಿದರನ್ನು ಸಮರ್ಥವಾಗಿ ನಿರ್ದೇಶಿಸಬಲ್ಲಂಥ “ಗುರು’ತರ ವ್ಯಕ್ತಿತ್ವ ಅವರದು. ಹಾಗಾಗಿಯೇ ಅವರ ಹೆಸರಿನೊಂದಿಗೆ “ಪ್ರಾಚಾರ್ಯ’ ಉಪಾಧಿಯಿದೆ. ಅವರ ಸುಪುತ್ರ ಶ್ರೀಧರ ಉಪ್ಪೂರರೇ ಸಂಪಾದಕತ್ವ ವಹಿಸಿ ಪ್ರಕಟಿಸಿರುವ ಅವರ ಶತಮಾನದ ಸ್ಮರಣ ಸಂಪುಟ ಕೇವಲ ಭಾಗವತರೊಬ್ಬರ ಸಾಧನೆಯ ಕಥನವಾಗದೆ, ಬಡಗುತಿಟ್ಟಿನ ಒಂದು ಕಾಲದ ಐತಿಹಾಸಿಕ ದಾಖಲೆಯಂತಿದೆ. ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ, ಅವಲೋಕ ಎಂಬ ಐದು ವಿಭಾಗಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಸುಮಾರು 100ಕ್ಕಿಂತ ಅಧಿಕ ಸಹೃದಯ ಲೇಖಕರು, ಕಲಾವಿಮರ್ಶಕರು, ಕಲಾವಿದರು, ಕಲಾಭಿಜ್ಞರು ಭಾಗವತರ ನೆನಪುಗಳನ್ನು ಹಂಚಿ ಕೊಂಡಿದ್ದಾರೆ.

Advertisement

ನಾರ್ಣಪ್ಪ ಉಪ್ಪೂರರದು ಸರ್ವಸಮರ್ಪಣಾಭಾವದ ಬದುಕು. ಯಕ್ಷಗಾನವನ್ನಲ್ಲದೆ ಬೇರೆ ಯೋಚಿಸಿದವರೇ ಅಲ್ಲ. ಹಣಕ್ಕೆ ಬಾಗದ, ಹೆಸರಿಗೆ ಬೀಗದ ಸ್ವಾಭಿಮಾನಿ. ಹಾಗಾಗಿಯೇ ಅವರು ಸತ್ತ ಮೇಲೆಯೂ ಹೀಗೆ ನಮ್ಮ ನಡುವೆ ಬದುಕುತ್ತಿದ್ದಾರೆ.

ಶತಸ್ಮತಿ
(ಭಾಗವತ, ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು)
ಸಂ.: ಡಾ. ಶ್ರೀಧರ ಉಪ್ಪೂರ
ಪ್ರ.: ಮಾರ್ವಿ ನಾರ್ಣಪ್ಪ ಉಪ್ಪೂರ ಜನ್ಮಶತಮಾನೋ ತ್ಸವ ಸಮಿತಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ- 576226, ಉಡುಪಿ ಜಿಲ್ಲೆ
ಮೊದಲ ಮುದ್ರಣ: 2019 ಬೆಲೆ: ರೂ. 300

ಶ್ರೀಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next