Advertisement

ಸಂಭ್ರಮದ ಇತಿಹಾಸ ಪ್ರಸಿದ್ಧ ಮಣೂರು ಕಂಬಳ ಮಹೋತ್ಸವ

08:35 PM Nov 24, 2019 | Team Udayavani |

ತೆಕ್ಕಟ್ಟೆ : ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಣೂರು ಕಂಬಳ ಮಹೋತ್ಸವವು ನ. 24ರಂದು ಸಂಪನ್ನಗೊಂಡಿತು.

Advertisement

ಕೃಷಿ ಬಿಡುವಿನಲ್ಲಿ ಮನರಂಜನೆಗೋಸ್ಕರ ಕೃಷಿ ಮನೆತನ ದವರು ತಮ್ಮ ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಶೃಂಗರಿಸಿ ಸಂಪ್ರದಾಯದಂತೆ ಹಸನಾಗಿ ಹದ ಮಾಡಿದ ಮಣ್ಣಿನ ಕೆಸರು ಗದ್ದೆಯಲ್ಲಿ ಅವುಗಳನ್ನು ಓಡಿಸಲು ಚಂಡೆ, ಡೋಲು, ಕೊಳಲು ನಾದ ಹಾಗೂ ಆಕರ್ಷಕ ವೇಷಭೂಷಣದೊಂದಿಗೆ ಮೆರವಣಿಗೆಯಲ್ಲಿ ಉತ್ಸವದಿಂದ ಸಾಗಿ ಬರುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದಿದ್ದು, ಅದರಲ್ಲಿಯೂ ಕೋಟದ ಹಂದೆ ಮನೆತನದ ಕೋಣಗಳನ್ನು ವಿಶೇಷ ರಾಜ ಆತಿಥ್ಯದೊಂದಿಗೆ ಬರಮಾಡಿಕೊಳ್ಳಲಾಯಿತು.

ಸಾಂಪ್ರದಾಯಿಕ ಮಣೂರು ಕಂಬಳ ಮಹೋತ್ಸವಕ್ಕೆ 500 ವರ್ಷಗಳ ಇತಿಹಾಸವಿದೆ. ಹಿಂದೆ ಕೋಟ ಜಗತ್ತಿನ ಸುಮಾರು 14ಗ್ರಾಮಗಳಿಂದ ಕೋಣಗಳು ಆಗಮಿಸುತ್ತಿದ್ದವು.ಮಣೂರು ಕಂಬಳಗದ್ದೆ ಮನೆತನದವರು ಸಂಪ್ರದಾಯದಂತೆ ಕಂಬಳ ನಡೆಸಿಕೊಂಡು ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next