Advertisement
QR Code: ಕ್ವಿಕ್ ರೆಸ್ಪಾನ್ಸ್ ಕೋಡ್ ಇದನ್ನು ಮೊದಲು 1994ರಲ್ಲಿ ಜಪಾನ್ ನಲ್ಲಿ ಆಟೋಮೊಬೈಲ್ ಉದ್ಯಮಕ್ಕಾಗಿ ವಿನ್ಯಾಸಗೊಳಿಸಲಾಯಿತು. ಕ್ಯೂಆರ್ ಕೋಡ್‌ನ ಮುಖ್ಯ ಉದ್ದೇಶವೆಂದರೆ ವಾಹನ ಉತ್ಪಾದನೆಯ ಸಮಯದಲ್ಲಿ ಅವುಗಳನ್ನು ಪತ್ತೆ ಮಾಡುವುದಾಗಿತ್ತು. ನಂತರ ಇದನ್ನು ಟ್ಯಾಗ್‌ಗಳು, ಜಾಹೀರಾತುಗಳು, ಆನ್‌ಲೈನ್ ಪೇಮೆಂಟ್, ಸುರಕ್ಷಿತ ಡೇಟಾ ವರ್ಗಾವಣೆ ಮತ್ತು ಇನ್ನೂ ಹೆಚ್ಚಿನ ಅಪ್ಲಿಕೇಶನ್‌ಗಳಿಗೆ ವಿಸ್ತರಿಸಲಾಯಿತು.
Related Articles
Advertisement
ಆದಾಗ್ಯೂ, ಬಾರ್‌ಕೋಡ್ ರೀಡರ್‌ನ ಅನಾನುಕೂಲವೆಂದರೆ ಅದು ಅಲ್ಪ ಪ್ರಮಾಣದ ಡೇಟಾವನ್ನು ಮಾತ್ರ ಸಂಗ್ರಹಿಸಬಲ್ಲದು ಮತ್ತು ಬಾರ್‌ಕೋಡ್ ಹಾನಿಗೊಳಗಾದರೆ ಸ್ಕ್ಯಾನರ್ ಕೋಡ್ ಅನ್ನು ಓದಲಾಗುವುದಿಲ್ಲ. ಇದನ್ನು ನಿವಾರಿಸಲು ಕ್ಯೂಆರ್ ಕೋಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಯೂಆರ್ ಕೋಡ್ ಬಾರ್‌ಕೋಡ್ ತಂತ್ರಜ್ಞಾನಕ್ಕಿಂತ 350 ಪಟ್ಟು ಹೆಚ್ಚು ಡೇಟಾವನ್ನು ಸಂಗ್ರಹಿಸಬಹುದು.
ಕ್ಯೂಆರ್ ಕೋಡ್ ವಿನ್ಯಾಸ !
ಕೆಳಗಿನ ಚಿತ್ರದಲ್ಲಿ ನೀವು ಕ್ಯೂಆರ್ ಕೋಡ್ ಸ್ವರೂಪವನ್ನು ಗಮನಿಸಬಹುದು.
- QR ಕೋಡ್‌ನಲ್ಲಿನ 3 ದೊಡ್ಡ ಬ್ಲಾಕ್ ಗಳು ಸಮಜೋಡಣೆಯನ್ನು ಸೂಚಿಸುತ್ತದೆ, ಇದರಿಂದ ಕೋಡ್ ಅನ್ನು ವಿಭಿನ್ನ ಕೋನಗಳೊಂದಿಗೆ ಸ್ಕ್ಯಾನ್ ಮಾಡಬಹುದು.
- ಚಿತ್ರದಲ್ಲಿ ನೀವು ನೋಡಬಹುದಾದ ಹಸಿರು ಪ್ರದೇಶವು ಯಾವಾಗಲೂ ಖಾಲಿ ಜಾಗವಾಗಿರುತ್ತದೆ.
- ಕೆಂಪು ಬಣ್ಣದ ಪ್ರದೇಶವು ದೋಷ ತಿದ್ದುಪಡಿ (Error Correctio) ಮಟ್ಟವಾಗಿದೆ, ಇದು QR ಕೋಡ್ ಹಾನಿಗೊಳಗಾಗಿದ್ದರೆ ಅಥವಾ QR ಕೋಡ್‌ನ ಒಂದು ಸಣ್ಣ ಭಾಗ ಕಳೆದುಹೋದರೆ ಡೇಟಾವನ್ನು ಮರುಪಡೆಯಲು ಸಹಾಯ ಮಾಡುತ್ತದೆ.
- ಹಳದಿ ಗುರುತು ಮಾಡಿದ ಸ್ಥಳವು ಕ್ಯೂಆರ್ ಕೋಡ್‌ನಲ್ಲಿ ಯಾವ ಮಾದರಿಯ ಕೋಡಿಂಗ್ ಬಳಸಲಾಗಿದೆ ಎಂಬುದನ್ನು ಸೂಚಿಸುತ್ತದೆ.
- ನೇರಳೆ ಬಣ್ಣದ ಸ್ಥಳ ಡೇಟಾದ ಗಾತ್ರವನ್ನು ಪ್ರತಿನಿಧಿಸುತ್ತದೆ.
- QR ಕೋಡ್‌ನ ನೀಲಿ ಭಾಗ ಕೂಡ ದೋಷಗಳನ್ನು (Error) ಸರಿಪಡಿಸಲು ಸಹಾಯ ಮಾಡುತ್ತದೆ.