Advertisement

ಕನ್ನಡ ಸಾಹಿತ್ಯ ಪರಿಷತ್‌ಗಿದೆ ಇತಿಹಾಸ; ನ್ಯಾಯವಾದಿ ವ್ಹಿ.ಆರ್‌.ಜನಾದ್ರಿ

05:30 PM May 13, 2022 | Team Udayavani |

ಹುನಗುಂದ: ಸಾಹಿತ್ಯದಲ್ಲೊಂದು ಸಂದೇಶವಿರಬೇಕು. ಸಂದೇಶವಿಲ್ಲದ ಸಾಹಿತ್ಯ ಸಾಹಿತ್ಯವೇ ಅಲ್ಲ. ಸಾಹಿತ್ಯದಲ್ಲಿ ನಿರಾಸಕ್ತಿ ಇರುವರರನ್ನು ಸಾಹಿತ್ಯ ಗಂಧವನ್ನು ತಿಳಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕರೆ ತರುವ ಕಾರ್ಯವಾಗಬೇಕು ಎಂದು ನ್ಯಾಯವಾದಿ ವ್ಹಿ.ಆರ್‌.ಜನಾದ್ರಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಾಗೂ ಹುನಗುಂದ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 108 ನೆಯ ಸಂಸ್ಥಾಪನಾ ದಿನಾಚರಣೆಯನ್ನು ಸ್ವರಚಿತ ಕವನ ವಾಚನ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಅಗಾಧವಾದ ಇತಿಹಾಸವಿದ್ದು. ಸಾಹಿತ್ಯಿಕ ಕ್ಷೇತ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರಾಜಕೀಯ ಮತ್ತು ಜಾತಿ ಸೇರಿಸಬಾರದು ಇದರಿಂದ ಪರಿಷತ್ತಿನಲ್ಲಿ ಗುಂಪುಗಾರಿಕೆ ಬೆಳೆದು ಇಡೀ ಸಾಹಿತ್ಯ ಪರಿಷತ್‌ನ ಮೂಲ ಉದ್ದೇಶವೇ ಹಾಳಾಗುತ್ತವೆ. ಇನ್ನು ತಾಲೂಕು ಘಟಕದಿಂದ ಕಾವ್ಯ, ಕಥೆ, ಕಾದಂಬರಿ ಕಮ್ಮಟಗಳು ನಡೆಯಬೇಕು ಮತ್ತು ಸಾಹಿತ್ಯಿಕ ತರಬೇತಿ ನಡೆಯಬೇಕು ಎಂದರು.

ವಿ.ಮ. ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಸ್‌.ಎಸ್‌.ಮುಡಪಲದಿನ್ನಿ ವಿಶೇಷ ಉಪನ್ಯಾಸ ನೀಡಿ, ಕನ್ನಡಿಗರಿಗೆ ಕನ್ನಡಿಗರೇ ಅಪರಿಚಿತರಾಗಿ ಕಾಣುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಮೂರು ದಿನದ ಜಾತ್ರೆ ಉತ್ಸವದಂತಾಗಿದೆ ಹಾಗೂ ಸರ್ಕಾರಿ ನೌಕರರಿಗೆ ಒಂದು ದಿನ ರಜೆ (ಓಡಿ) ಸಿಗುವ ಆಸೆಗೆ ಭಾಗವಹಿಸುವಂತಾಗಿದೆ .ಇದು ಆಗಬಾರದು ಸಮ್ಮೇಳನ ಸಾಹಿತ್ಯ ಆಸಕ್ತರ ಮೇಲೆ ಪರಿಣಾಮಕಾರಿ ಪ್ರಭಾವ ಬೀರುವಂತಾಗಬೇಕು. ಹರಿದು ಹಂಚಿ ಹೋಗಿರುವ ಕನ್ನಡ ಭಾಷೆಯ ಉಳಿಗಾಗಿ ಮತ್ತು ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯದ ಮುಂದಿನ ಪೀಳಿಗೆ ಹರಡುವ ಉದ್ದೇಶದಿಂದ ಜನ್ಮ ತಾಳಿದೆ. ಈ ಸಂಸ್ಥೆಯನ್ನು ಕಟ್ಟಲು ನಾಲ್ವಡಿ ಕೃಷ್ಣರಾಜ ಒಡೆಯರು, ಸರ್‌.ಎಂ.ವಿಶ್ವೇಶ್ವರ, ಆಲೂರ ವೆಂಕಟರಾಯರ ಅಗಾಧ ಶ್ರಮವಿದೆ ಎಂದರು.

ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗಣ್ಣ ಎಮ್ಮಿ, ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಮಾತನಾಡಿದರು. ಈ ಸಂದರ್ಭದಲ್ಲಿ ಅಮೀನಗಡದ ವಲಯ ಘಟಕದ ಅಧ್ಯಕ್ಷ ನರಸಿಂಹಮೂರ್ತಿ,ಜಿಲ್ಲಾ ಪ್ರತಿನಿಧಿ ಯೋಗೇಶ ಲಮಾಣಿ, ಡಾ| ನಾಗರಾಜ ನಾಡಗೌಡ್ರ, ಎಸ್‌.ಕೆ.ಕೊನೆಸಾಗರ, ಶರಣಪ್ಪ ಹೂಲಗೇರಿ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next