Advertisement
ಬಾಕ್ಸಿಂಗ್ ಡೇ ಅಂದರೆ ಕ್ರಿಸ್ಮಸ್ ನ ಮರುದಿನ ಅಂದರೆ ಡಿಸೆಂಬರ್ 26. ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್ ಮುಂತಾದ ಕಾಮನ್ ವೆಲ್ತ್ ಆಡಳಿತಕ್ಕೆ ಒಳಪಟ್ಟಿದ್ದ ದೇಶಗಳಲ್ಲಿ ಬಾಕ್ಸಿಂಗ್ ಡೇ ಎಂದರೆ ರಜೆಯ ದಿನ. ಐರ್ಲೆಂಡ್ ನಲ್ಲಿ ಇದನ್ನು ಸೇಂಟ್ ಸ್ಟಿಫನ್ಸ ಡೇ ಎಂದೂ ಗುರುತಿಸಲಾಗುತ್ತದೆ. ಈ ದಿನ ಹಲವಾರು ಕ್ರೀಡೆಗಳನ್ನು ಆಯೋಜಿಸಿ ಬಹುಮಾನಗಳನ್ನು ನೀಡುವ ಸಂಪ್ರದಾಯ ಹಲವು ರಾಷ್ಟ್ರಗಳಲ್ಲಿತ್ತು.
ಶತಮಾನದ ಹಿಂದೆ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವಿನ ಪಂದ್ಯವನ್ನು ಕ್ರಿಸ್ಮಸ್ ಸಮಯದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಮಯದಲ್ಲಿ ಆಟಗಾರರು ಕ್ರಿಸ್ಮಸ್ ಹಬ್ಬವನ್ನು ಆ ಪಂದ್ಯದಿಂದಾಗಿ ತಪ್ಪಿಸಿಕೊಂಡಿದ್ದರು. 1950-51 ಆಶಸ್ ಸರಣಿಯನ್ನು ಡಿಸೆಂಬರ್ 22ರಿಂದ 27ರ ವರೆಗೆ ನಡೆದಿತ್ತು. ಈ ಪಂದ್ಯಾವನ್ನು ಕೂಡ ಬಾಕ್ಸಿಂಗ್ ಡೇ ಎಂದೇ ಕರೆಯುತ್ತಿದ್ದರು. ಆದರೆ 1953 ರಿಂದ 1967 ರವರೆಗೆ ಮೆಲ್ಬೋರ್ನ್ ನಲ್ಲಿ ಯಾವುದೇ ಬಾಕ್ಸಿಂಗ್ ಡೇ ಪಂದ್ಯಗಳು ನಡೆಯಲಿಲ್ಲ. 1974ರಿಂದ ಡಿಸೆಂಬರ್ 26ರಂದು ಆರಂಭವಾಗುವಂತೆ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗುತ್ತದೆ. ಪ್ರತಿಯೊಂದು ಬಾಕ್ಸಿಂಗ್ ಡೇ ಕ್ರಿಕೆಟ್ ಪಂದ್ಯಗಳು ಮೆಲ್ಬೋರ್ನ್ ಕ್ರೀಡಾಂಗಣದಲ್ಲೇ ನಡೆಯುವುದು ವಿಶೇಷ. ಮತ್ತು ಪ್ರತಿ ಸಲವೂ ಇದರಲ್ಲಿ ಆಸ್ಟ್ರೇಲಿಯಾ ಭಾಗವಸುತ್ತದೆ.
Related Articles
Advertisement
ಇಷ್ಟರವರೆಗೆ ಒಟ್ಟು 43 ಟೆಸ್ಟ್ ಪಂದ್ಯಗಳು ಬಾಕ್ಸಿಂಗ್ ಡೇ ಪಂದ್ಯಗಳನ್ನು ನಡೆದಿವೆ. ಪ್ರಸ್ತುತ ಭಾರತ ವಿರುದ್ಧ ನಡೆಯುವ ಪಂದ್ಯಾಟ 44 ಟೆಸ್ಟ್ ಪಂದ್ಯ. 1950ರಲ್ಲಿ ಮೊದಲ ಪಂದ್ಯ ನಡೆದಿತ್ತು. ಇಂಗ್ಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 28 ರನ್ ಗಳ ಅಂತರದಿಂದ ವಿಜಯಿಯಾಗಿತ್ತು. ಇಷ್ಟರವರೆಗೆ ಒಟ್ಟು9 ಪಂದ್ಯಗಳು ಡ್ರಾ ಆಗಿದ್ದರೆ 24 ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದು ಬೀಗಿದೆ.
ಭಾರತ ತಂಡ ಮೊದಲ ಸಲ ಬಾಕ್ಸಿಂಗ್ ಡೇ ಕಣಕ್ಕಿಳಿದದ್ದು1985ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ. ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಅಂದಿನಿಂದ ಭಾರತ ತಂಡ 2014ರವೆರೆಗೆ ಒಟ್ಟು 7 ಮೆಲ್ಬೋರ್ನ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಡಿದ್ದು, ಗೆಲುವು ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.
ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತವಾದ ಬಾಕ್ಸಿಂಗ್ ಡೇ ಏಕೈಕ ಏಕದಿನ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಇದು ನಡೆದದ್ದು 1989ರಲ್ಲಿ. ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯಾವಳಿಯಲ್ಲಿ ಸೆಣಸಾಡಿತ್ತು. ಅಂತಿವಾಗಿ ಆತಿಥೇಯ ಆಸ್ಟ್ರೇಲಿಯಾ 30 ರನ್ ಗಳಿಂದ ವಿಜಯಿಯಾಗಿತ್ತು. ಕೀರ್ತನ್ ಶೆಟ್ಟಿ ಬೋಳ