Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಸೋಮವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಜಿ.ಎಸ್.ಶಿವರುದ್ರಪ್ಪ ಅವರ ಸಾಹಿತ್ಯದ ವಿಭಿನ್ನ ನೆಲೆಗಳು’, ಎಂಬ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ದ್ವೇಷ, ಅಸೂಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜಿ.ಎಸ್.ಎಸ್ ಅವರ;
ಚರ್ಚಿಗೆ, ಚಲಿಸುವ ರೈಲಿಗೆ, ಓಡುತ್ತಿರುವ ಬಸ್ಸಿಗೆ
ಬಹುಕಾಲದಿಂದ ಹೇಗೋ ಕಾಪಾಡಿಕೊಂಡು ಬಂದಿರುವ
ಪಾರಿವಾಳಗಳ ಕನಸಿನ ಗೂಡಿಗೆ.. ಎಂಬ, “ಅಗ್ನಿ ಪರ್ವ’ದ ಸಾಲುಗಳನ್ನು ನೆನಪಿಸಿದರು. “ಸಾಮಾಗಾನ’ದಿಂದ ಆರಂಭವಾದ ಜಿ.ಎಸ್.ಎಸ್ ಅವರ ಕವನದ ಸಾಲುಗಳು “ಅಗ್ನಿಪರ್ವ’ದ ಮೂಲಕ ಮುಕ್ತಾಯವಾಯಿತು. ಇದಕ್ಕೆ ವ್ಯವಸ್ಥೆ ಕಾರಣವಾಯಿತ್ತು. ಎಲ್ಲವನ್ನೂ ಗ್ರಹಿಸುತ್ತಿದ್ದ ಅವರು, ಕಾವ್ಯಗಳ ಮೂಲಕ ವ್ಯವಸ್ಥೆಯ ವಿರುದ್ಧದ ಸಿಟ್ಟು, ಆಕ್ರೋಶ ಹೊರಹಾಕಿದರು ಎಂದು ಹೇಳಿದರು.
Related Articles
Advertisement
ಕರ್ನಾಟಕ ಸುಗಮ ಸಂಗೀತ ಪರಿಷತ್ ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿ ಶ್ರೇಯಸ್ಸು ಜಿ.ಎಸ್.ಎಸ್ ಅವರಿಗೆ ಸಲ್ಲುತ್ತದೆ. ಕುವೆಂಪು ವೈಚಾರಿಕ ಮುಖವನ್ನು ಸುಗಮ ಸಂಗೀತದ ಮೂಲಕ ಜನರಿಗೆ, ಜಗತ್ತಿಗೆ ತಲುಪಿಸಿದ ಕೀರ್ತಿ ಕೂಡ ಶಿವರುದ್ರಪ್ಪ ಅವರದ್ದಾಗಿದೆ ಎಂದು ಸ್ಮರಿಸಿದರು.
“ಜಿ.ಎಸ್.ಎಸ್ ಅವರ ಕಾವ್ಯ ಜಗತ್ತು’, ಕುರಿತು ಬಿದರಹಳ್ಳಿ ನರಸಿಂಹಮೂರ್ತಿ ಮಾತನಾಡಿದರು. ಜಿ.ಎಸ್.ಎಸ್ ಪ್ರತಿಷ್ಠಾನ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮರ್ಶಕ ಡಾ.ಬಸವರಾಜ ಕಲ್ಗುಡಿ, ಡಾ.ಎಂ.ಎಸ್.ಆಶಾದೇವಿ ಮತ್ತಿತರರು ಇದ್ದರು.