ಮುಂಬಯಿ: ಇತಿಹಾಸದ ಓದು ಬಹಳ ಮಹತ್ವದ್ದು ಅನ್ನೋದು ನಿಜ. ಆದರೆ ಮಹಾರಾಷ್ಟ್ರ ಸರಕಾರ ಇದಕ್ಕೆ ತದ್ವಿರುದ್ಧವಾದ ಕ್ರಮಕ್ಕೆ ಮುಂದಾಗಿದೆ.
ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿ 7ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಭಾರತೀಯ ಇತಿಹಾಸದ ಪ್ರಮುಖ ಭಾಗ ಎಂದೇ ಹೇಳಲಾಗುವ ಮೊಘಲ್ ಹಾಗೂ ಪಾಶ್ಚಿಮಾತ್ಯ ಇತಿಹಾಸ ಅಪ್ರಸ್ತುತ ಎಂದು ರಾಜ್ಯ ಶಿಕ್ಷಣ ಇಲಾಖೆಯ ಇತಿಹಾಸ ವಿಷಯಕ್ಕೆ ಸಂಬಂಧಿಸಿದ ಸಮಿತಿ ಅಭಿಪ್ರಾಯಪಟ್ಟಿದೆ.
ಇತಿಹಾಸ ಪಠ್ಯದಲ್ಲಿ 1960ರಲ್ಲಿನ ಮರಾಠಾ ಸಾಮ್ರಾಜ್ಯ ಹಾಗೂ ರಾಜ ಶಿವಾಜಿಯ ರಾಜಕೀಯ ವಿಚಾರವಾಗಿಯೇ ವಿಷಯಗಳು ಬರುತ್ತಾ ಹೋಗುತ್ತವೆ ಎನ್ನುವ ಸಮಿತಿ ಸದಸ್ಯರು, “ಈ ಬದಲಾವಣೆ ಯಾವುದೇ ರಾಜಕೀಯವನ್ನು ಒಳಗೊಂಡಿಲ್ಲ. ಆ ವಿಷಯಕ್ಕೆ ಸಂಬಂಧಿಸಿದ ತಜ್ಞರು ಹಾಗೂ ಶಿಕ್ಷಕರ ಅಭಿಪ್ರಾಯವನ್ನೇ ಆಧರಿಸಿ ಮಾಡಿರುವಂಥದ್ದು’ ಎಂದಿದ್ದಾರೆ.
ಒಟ್ಟಾರೆ ಸಮಿತಿಯ ಕ್ರಮ ಈಗ ಮಹಾ ರಾಷ್ಟ್ರ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಕ್ಕಳಿಗೆ ಈ ವಿಷಯ ಬೇಕೋ ಬೇಡವೋ ಎನ್ನುವ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತಗೊಳ್ಳುತ್ತಿವೆ.
7ನೇ ತರಗತಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯ, ಮಹಾರಾಷ್ಟ್ರ ಹಾಗೂ ಅದಕ್ಕೂ ಮೊದಲು ಭಾರತದಲ್ಲಿನ ಆಡಳಿತ, ಜತೆಗೆ ಛತ್ರಪತಿ ಶಿವಾಜಿ ಕುರಿತ ಪಾಠಗಳಿವೆ. 9ನೇ ತರಗತಿಯಲ್ಲಿ ಮತ್ತೆ ರಾಜಕೀಯವಾಗಿ ಏನೆಲ್ಲಾ ಪರಿಣಾಮ, ಬದಲಾವಣೆಗಳು ಆದವು ಎನ್ನವುದು ಬರಲಿದೆ. ಇವುಗಳಲ್ಲಿ ಕೆಲವು ಅಪ್ರಸ್ತುತ ಎನಿಸುತ್ತವೆ.
– ಸದಾನಂದ ಮೋರೆ, ಇತಿಹಾಸ ಸಮಿತಿ ಮುಖ್ಯಸ್ಥ