Advertisement

ಗೆದ್ದು ಅಭಿವೃದ್ಧಿಯಲ್ಲಿ ಇತಿಹಾಸ: ಬಂಗೇರ

01:11 PM May 10, 2018 | Team Udayavani |

ಬೆಳ್ತಂಗಡಿ: ತಾಲೂಕಿನ ಪತ್ರಕರ್ತ ರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಕೆ. ವಸಂತ ಬಂಗೇರ ತಾ|ನ ಅಭಿವೃದ್ಧಿಗೆ ತಮ್ಮ ಯೋಜನೆ, ಪ್ರಶ್ನೆಗಳಿಗೆ ತಮ್ಮ ಉತ್ತರ ನೀಡಿದ್ದಾರೆ.

Advertisement

1 ಸಾವಿರ ಕೋ. ರೂ.ಗೂ ಮಿಕ್ಕಿ ಅನುದಾನಗಳನ್ನು ಈ ಅವಧಿಯಲ್ಲಿ ಜನರಿಗಾಗಿ ಮಂಜೂರು ಮಾಡಿಸಲಾಗಿದೆ. ಮುಂದಿನ ಅವಧಿಗೂ ಆಯ್ಕೆಯಾಗಿ 1,500 ಕೋಟಿ ರೂ.ಗೂ ಮಿಕ್ಕಿ ಅನುದಾನ ಮಂಜೂರು ಮಾಡಿಸಿ ಹಿಂದೆ ಯಾವುದೇ ಶಾಸಕ ಮಾಡಿರಬಾರದು ಮುಂದೆ ಯಾರೂ ಮಾಡದಂತಹ ಸಾಧನೆ ಮಾಡಿ ತಾಲೂಕಿನಲ್ಲಿ ಇತಿಹಾಸ ನಿರ್ಮಿಸ ಲಾಗುವುದು ಎಂದು ಕೆ. ವಸಂತ ಬಂಗೇರ ಹೇಳಿದರು.

ತಾಲೂಕಿನಲ್ಲಿ ರಸ್ತೆ, ವಿದ್ಯುತ್‌, ಶಾಲೆ, ಕಾಲೇಜು, ಆಸ್ಪತ್ರೆ, ಮನೆ, ಸೇತುವೆ ಮೊದಲಾದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ತನ್ನ 35 ವರ್ಷಗಳ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಕುಗ್ರಾಮಗಳಲ್ಲಿ ಜನತೆ ವಾಸಿಸುತ್ತಿದ್ದು, ಅವರಿಗೂ ವಿದ್ಯುತ್‌ ಮೊದಲಾದ ಸೌಲಭ್ಯ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಹಲವೆಡೆ ಸೌಲಭ್ಯ ಕಲ್ಪಿಸಬೇಕಿದ್ದು, ಅದನ್ನು ಆದಷ್ಟು ಬೇಗ ಪೂರೈಸಲಾಗುವುದು. ತಾಲೂಕಿನಲ್ಲಿ ಹೋಗುವ ರಾಷ್ಟ್ರಿಯ ಹೆದ್ದಾರಿ ಚತುಷ್ಪಥ ಮಾಡಲು ಅವಕಾಶವಿದ್ದು, ದ್ವಿಪಥ ರಸ್ತೆ ಮಾಡಲಾಗುವುದು ಎಂದರು.

ಬಿಜೆಪಿ ಅಭ್ಯರ್ಥಿ ಸ್ಥಳೀಯ ಆಡಳಿತ ದಲ್ಲಿ ಗುರುತಿಸಿಕೊಂಡಿಲ್ಲ. ಪ್ರಥಮ ಬಾರಿಗೆ ಸ್ಪರ್ಧಿಸುತ್ತಿದ್ದು, ರಾಜಕೀಯ ತಿಳಿದಿಲ್ಲ. ನಗರ ಪಂ. ಅಧ್ಯಕ್ಷ ಮುಗುಳಿನಾರಾಯಣ ರಾವ್‌, ಕಾಂಗ್ರೆಸ್‌ ಕಾರ್ಯ ಕರ್ತನ ಮನೆಮುಂದೆ ಮಾಟ ಮಂತ್ರ ಮಾಡಿಸಿ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಬಂಗೇರ ಆರೋಪಿಸಿದರು.

ಹಕ್ಕುಪತ್ರ ವಿತರಣೆ
ತಾ|ನಲ್ಲಿ 38 ಸಾವಿರ ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಜಿಲ್ಲೆಯಲ್ಲಿಯೇ ಅತಿಹೆಚ್ಚು 94ಸಿ, 94ಸಿಸಿ ಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ.

Advertisement

35ಸಾವಿರದಷ್ಟು ಬಿಪಿಎಲ್‌ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲಾಗುತ್ತದೆ ಎಂದರು.

ದಿಡುಪೆಯಿಂದ-ಎಳನೀರು -ಸಂಸೆ ರಸ್ತೆ ಅಭಿವೃದ್ಧಿಪಡಿಸಲಾಗುವುದು. 20 ಕೋಟಿ ರೂ.ನ ಯೋಜನೆ ಈಗಾಗಲೇ ರೂಪಿಸಲಾಗಿದೆ. ಅದರೆ ಸ್ಪಂದನೆ ದೊರೆತಿಲ್ಲ. ಶಿಶಿಲ-ಭೈರಾಪುರ ರಸ್ತೆ ನಿರ್ಮಾಣ ಮಾಡಬೇಕೆಂಬ ಹಂಬಲವೂ ಇದೆ. ಇದು ನಿರ್ಮಾಣವಾದಲ್ಲಿ ಕೇವಲ 9 ಕಿ.ಮೀಗಳಲ್ಲಿ ಘಾಟಿ ದಾಟಲು ಸಾಧ್ಯವಿದೆ. ಸತತ ಪಯತ್ನ ನಡೆಯುತ್ತಿದೆ. ರಸ್ತೆ ಈಗಾಗಲೇ ಇದ್ದು, ಸರ್ವೇ ಕಾರ್ಯ ನಡೆದಿದೆ. ಈ ರಸ್ತೆ ಅಭಿವೃದ್ಧಿಗೊಳಿಸಲು ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next