Advertisement

ಟೀಕಿಸಿದವರನ್ನು ಇತಿಹಾಸ ಮರೆಯದು

01:19 AM Oct 18, 2019 | mahesh |

ಬೀಡ್‌: ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನು ವಿರೋಧಿಸಿದವರನ್ನು ಇತಿಹಾಸ ಯಾವತ್ತೂ ನೆನಪಿನಲ್ಲಿ ಇರಿಸಿಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಾ ರಾಷ್ಟ್ರದ ಬೀಡ್‌ ಜಿಲ್ಲೆಯ ಪಾರ್ಲಿ ಎಂಬಲ್ಲಿ ಗುರುವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.21ರ ಮತದಾನದ ಬಳಿಕ ಬಿಜೆಪಿ ನೇತೃತ್ವದ ಮೈತ್ರಿಕೂಟ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಈ ವಿಧಾನಸಭೆ ಚುನಾವಣೆ ಬಿಜೆಪಿಯ ಅಧಿವೃದ್ಧಿಗಾಗಿ ಅಧಿಕಾರ ಮತ್ತು ವಿಪಕ್ಷಗಳ ಸ್ವಾರ್ಥ ಸಾಧನೆಯ ನಡುವಿನ ಹೋರಾಟ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ದೇಶ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್‌ ಆಕ್ಸಿಜನ್‌ ಪೂರೈಸುತ್ತಿತ್ತು ಎಂದು ಹೇಳಿದ ಪ್ರಧಾನಿ, ಜಮ್ಮು ಮತ್ತು ಕಾಶ್ಮೀ ರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿ ಧಾನದ 370ನೇ ವಿಧಿ ರದ್ದು ಮಾಡಿದ್ದಕ್ಕೆ ವಿರೋಧ ಮಾಡುವವರನ್ನು ಇತಿಹಾಸ ಯಾವತ್ತೂ ನೆನಪಿನಲ್ಲಿ ಇರಿಸಿಕೊಳ್ಳಲಿದೆ. ಕಾಶ್ಮೀ ರದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದ್ದರೆ ಈ ನಿರ್ಧಾರ ಕೈಗೊಳ್ಳಲಾಗುತ್ತಿರಲಿಲ್ಲ ಎಂಬ ಕಾಂಗ್ರೆಸ್‌ ನಾಯಕರ ಟೀಕೆಗೆ ಉತ್ತರಿಸಿದ ಅವರು, ದೇಶದ ಏಕತೆ ವಿಚಾರ ಬಂದಾಗ ಹಿಂದೂ ಅಥವಾ ಮುಸ್ಲಿಂ ಎಂಬ ವಿಚಾರ ಬರುವುದಿಲ್ಲ ಎಂದಿದ್ದಾರೆ.

ಅಟಲ್‌ ಜಂಟಲ್‌ ಮ್ಯಾನ್‌: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಓರ್ವ ಸುಸಂಸ್ಕೃತ ವ್ಯಕ್ತಿಯಾಗಿದ್ದರು. ಅವರು ಯಾವತ್ತೂ ತಮ್ಮ ನಿರ್ಧಾರಗಳಿಂದ ಇತರರಿಗೆ ನೋವಾಗದಂತೆ ನಡೆದುಕೊಳ್ಳುತ್ತಿದ್ದರು. ಆದರೆ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಿಣಾಮಕಾರಿ ವ್ಯಕ್ತಿಯಾಗಿದ್ದರೂ, ಯಾವುದಾ ದರೂ ನಿರ್ಧಾರ ಕೈಗೊಳ್ಳುವ ವಿಚಾರ ಬಂದಾಗ ಅವರು ನಿರ್ದಯಿ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next