Advertisement

Historic ಕನ್ನಡದಲ್ಲೂ ಕೇಶವಾನಂದ ಭಾರತಿ ತೀರ್ಪು

12:20 AM Dec 08, 2023 | Team Udayavani |

ಹೊಸದಿಲ್ಲಿ: ಸಂವಿಧಾನದ ಮೂಲ ರಚನೆಯ ಸಿದ್ಧಾಂತವನ್ನು ರೂಪಿಸಿದ ಐತಿಹಾಸಿಕ ಕೇಶವಾನಂದ ಭಾರತಿ ತೀರ್ಪು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ತಿಳಿಸಿದ್ದಾರೆ.

Advertisement

1973ರ ಎ. 24 ರಂದು ಈ ಪ್ರಕರಣದ ತೀರ್ಪು ಪ್ರಕಟಿಸಲಾ ಗಿತ್ತು. ಈ ತೀರ್ಪು ಹೊರಬಿದ್ದು 2023ರ ಎ. 24ಕ್ಕೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಕೇಶವಾನಂದ ಭಾರತಿ ಪ್ರಕರಣಕ್ಕೆ ವಿಶೇಷ ವೆಬ್‌ಸೈಟ್‌ ರಚಿಸಿತು. ಇದೀಗ ತೀರ್ಪು ಕನ್ನಡ, ಹಿಂದಿ, ತೆಲುಗು, ತಮಿಳು, ಒಡಿಯಾ, ಮಲಯಾಳ, ಗುಜ ರಾತಿ, ಬೆಂಗಾಲಿ, ಅಸ್ಸಾಮಿ ಹಾಗೂ ಮರಾಠಿ ಭಾಷೆಗಳಲ್ಲಿ ಲಭ್ಯವಿದೆ. “ತೀರ್ಪುಗಳನ್ನು ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸಲು ನಮ್ಮ ಪ್ರಯತ್ನಗಳಿಗೆ ಇದು ನಿದರ್ಶನವಾಗಿದೆ. ಸುಪ್ರೀಂನ 20 ಸಾವಿರ ತೀರ್ಪುಗಳನ್ನು ಭಾರ ತೀಯ ಭಾಷೆಗಳಲ್ಲಿ ಅನುವಾದಿಸಿ ಇ-ಎಸ್‌ಸಿಆರ್‌(ಸುಪ್ರೀಂ ಕೋರ್ಟ್‌ ವರದಿಗಳ ಎಲೆಕ್ಟ್ರಾನಿಕ್‌ ಆವೃತ್ತಿ)ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ’ ಎಂದು ಸಿಜೆಐ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next